Latest

ಮಂಗಳವಾರ ರಸ್ತೆ ಮೇಲ್ಸೇತುವೆ, ರೈಲ್ವೆ ನಿಲ್ದಾಣದ ಎರಡು ಲಿಫ್ಟ್‌ಗಳ ಲೋಕಾರ್ಪಣೆ

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನೈರುತ್ಯ ರೈಲ್ವೆ ಇವರಿಂದ ಬೆಳಗಾವಿಯ ಗೋಗಟೆ ವೃತ್ತದಲ್ಲಿನ ಪುನರ್ ನಿರ್ಮಾಣಗೊಂಡ ರಸ್ತೆ ಮೇಲ್ಸೇತುವೆ ಹಾಗೂ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ ಒಂದು ಮತ್ತು ಎರಡು/ಮೂರರಲ್ಲಿ ಎರಡು ಲಿಫ್ಟ್‌ಗಳ ಲೋಕಾರ್ಪಣೆ ಕಾರ್ಯಕ್ರಮ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಗೋಗಟೆ ವೃತ್ತದಲ್ಲಿ ನಡೆಯಲಿದೆ.
ಲೋಕಸಭಾ ಸದಸ್ಯರೂ, ಲೋಕಸಭಾ ವಸತಿ ಸಮಿತಿ ಅಧ್ಯಕ್ಷರೂ ಆದ ಸುರೇಶ್ ಅಂಗಡಿ ಲೋಕಾರ್ಪಣೆ ನೆರವೇರಿಸುವರು. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನೀಲ ಬೆನಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಸಚಿವ ಸತೀಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಬೆಳಗಾವಿ ಮಹಾಪೌರ ಬಸಪ್ಪಾ ಚಿಕ್ಕಲದಿನ್ನಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಅರುಣ ಶಹಾಪುರ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಉಪಸ್ಥಿತರಿರುವರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button