ಇಂದು ಬೆಳಗಾವಿಯಲ್ಲಿ 13, ರಾಜ್ಯದಲ್ಲಿ 1694 ಜನರಿಗೆ ಕೊರೋನಾ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಒಟ್ಟೂ 1694 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಬೆಂಗಳೂರು ಒಂದರಲ್ಲೇ 994 ಜನರಿಗೆ ಸೋಂಕು ಪತ್ತೆಯಾಗಿದೆ. ಬೆಳಗಾವಿಯಲ್ಲಿ 13 ಜನರಿಗೆ ಸೋಂಕು ತಗುಲಿದೆ. 21 ಜನರು ಇಂದು ಸಾವಿಗೀಡಾಗಿದ್ದಾರೆ.

ಬಳ್ಳಾರಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 97 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಕಲಬುರಗಿ 72, ತುಮಕೂರು 57, ಬೆಂಗಳೂರು ಗ್ರಾಮಾಂದರ 44, ಧಾರವಾಡ 38, ಮೈಸೂರು 35, ಮಂಡ್ಯ 33, ಬೀದರ್ 28, ಚಾಮರಾಜನಗರ 24, ಶಿವಮೊಗ್ಗ 23, ಗದಗ 19,  ಉಡುಪಿ ಹಾಗೂ ಕೊಡಗು ತಲಾ 16, ಯಾದಗಿರಿ 14, ಹಾಸನ, ಬೆಳಗಾವಿ ತಲಾ 13 ಜನರಿಗೆ ಸೋಂಕು ಪತ್ತೆಯಾಗಿದೆ.

Home add -Advt

ಕೋಲಾರ 11, ರಾಮನಗರ 10, ಬಾಗಲಕೋಟೆ 8, ರಾಯಚೂರು 7, ದಾವಣಗೆರೆ ಹಾಗೂ ಉತ್ತರ ಕನ್ನಡ ತಲಾ 5, ವಿಜಯಪುರ, ಕೊಪ್ಪಳ ತಲಾ 4, ಚಿಕ್ಕಬಳ್ಳಾಪುರ, ಚಿತ್ರದುರ್ಗ ತಲಾ 3 ಹಾಗೂ ಹಾವೇರಿಯಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ಇಂದು ರಾಜ್ಯದಲ್ಲಿ ಪತ್ತೆಯಾಗಿರುವ ಬಹುತೇಕ ಪ್ರಕರಣಗಳ ಸಂಪರ್ಕ ಇನ್ನೂ ಪತ್ತೆಯಾಗಿಲ್ಲ.

Related Articles

Back to top button