Latest

ಮತದಾನ ಜಾಗೃತಿಗೆ ಬಾನಂಗಳದಲ್ಲಿ ಬಲೂನು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಲೋಕಸಭಾ ಚುನಾವಣೆ-೨೦೧೯ರ ಮತದಾರರ ಜಾಗೃತಿಯ ಸಲುವಾಗಿ ಜಿಲ್ಲಾ ಸ್ವೀಪ್ ಸಮಿತಿಯು ಹಲವಾರು ಆಕರ್ಷಕ ಮತ್ತು ವಿನೂತನ ಕ್ರಮ ಕೈಗೊಂಡಿದೆ.

ಮತದಾನದ ಮಾಹಿತಿ ಮತ್ತು ಜಾಗೃತಿಯ ವಿವರಗಳನ್ನು ೧೦ X ೧೦ ಪೂಟ್ ಅಳತೆಯ ಬೃಹತ್ ಬಲೂನಿನಲ್ಲಿ ಮುದ್ರಿಸಿ, ೧೨೦ ಅಡಿ ಎತ್ತರದಲ್ಲಿ ಬೆಳಗಾವಿ ಕೋಟೆಕೆರೆ ವೃತ್ತದಲ್ಲಿ ಬಾನಂಗಳದಲ್ಲಿ ರಾರಾಜಿಸುವಂತೆ ಅಳವಡಿಸಲಾಗಿದೆ.
ಜನ ಸಂಚಾರದ ಪ್ರಮುಖ ಕೇಂದ್ರವಾಗಿರುವ ಈ ಸ್ಥಳದಲ್ಲಿ ಜನರೆಲ್ಲರೂ ಇದನ್ನು ಗಮನಿಸುವಂತೆ, ಮಾಡಲಾಗಿರುವುದು ವಿಶೇಷವಾಗಿದೆ. ಜಿಲ್ಲಾ ಸ್ವೀಪ್ ಸಮಿತಿಯು ಬೆಳಗಾವಿ ನಗರದ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಈ ರೀತಿ ಬೇರೆ ಬೇರೆ ಆಕರ್ಷಕ ಮುದ್ರಣದೊಂದಿಗೆ ಮತದಾರರ ಜಾಗೃತಿಯ ಬಗ್ಗೆ ಮಾಹಿತಿ ನೀಡುವ ಪ್ಲೆಕ್ಸ್, ಬ್ಯಾನರ್‌ಗಳು, ಬುಕ್ ಮಾರ್ಕಗಳು ಮತ್ತು ಸ್ಟಿಕ್ಕರ್‌ಗಳು ಹೀಗೆ ಹಲವಾರು ಕ್ರಮ ಕೈಗೊಂಡಿದೆ.

Home add -Advt

Related Articles

Back to top button