Latest

ಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಲೋಕಸಭಾ ಚುನಾವಣೆ ೨೦೧೯ ರಲ್ಲಿ ಅತೀ ಹೆಚ್ಚಿನ ಮತದಾನ ನಡೆಯುವಂತಾಗಲು ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಏ.೩ ರಂದು ಜಿಲ್ಲಾ ಸ್ವೀಪ್ ಸಮಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಕಚೇರಿಯ ಸಿಬ್ಬಂದಿ, ಗ್ರಾಮೀಣ ಮತ್ತು ನಗರ ವಲಯದ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳಗಾವಿ ಗ್ರಾಮೀಣ, ಬೆಳಗಾವಿ ನಗರ ವಲಯ ಮತ್ತು ಸಿಬ್ಬಂದಿ ವತಿಯಿಂದ ಮತದಾನ ಜಾಗೃತಿಗಾಗಿ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು. 
ಪ್ರೊಬೇಷನರಿ ಐಎಎಸ್ ಅಧಿಕಾರಿ ಭಂವರ್‌ಸಿಂಗ್ ಮೀನಾ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಹಾಗೂ ಜಿಲ್ಲಾ ಸ್ವೀಪ್ ಐಕಾನ್ ರಾಘವೇಂದ್ರ ಅಣ್ವೇಕರ ರ್‍ಯಾಲಿ ಉದ್ಘಾಟಿಸಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಭಂವರ್‌ಸಿಂಗ್ ಮೀನಾ, ಯಾವುದೇ ಕಾರಣಕ್ಕೂ ಯಾರೂ ಮತದಾನದಿಂದ ಹೊರಗುಳಿಯದಂತೆ ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ ಎಂದರು.
ಪರಶುರಾಮ ದುಡಗುಂಟಿ, ಸಿವಿಜಿಲ್ ನೋಡಲ್ ಅಧಿಕಾರಿ ಡಿ.ಜಿ. ನಾಗೇಶ ಮಾತನಾಡಿದರು. ವಿಶ್ವೇಶ್ವರಯ್ಯ ನಗರದ ಬಿಇಓ ಕಚೇರಿಯಿಂದ ಪ್ರಾರಂಭವಾದ ರ್‍ಯಾಲಿ ಲಕ್ಷ್ಮಿ ಕಾಂಪ್ಲೆಕ್ಸ್, ಕೊಲ್ಹಾಪೂರ ಸರ್ಕಲ್, ರಾಮದೇವ ಹೊಟೇಲ್, ಶಿವಬಸವ ನಗರ, ಶ್ರೀನಗರ ಗಾರ್ಡನ್, ವಂಟಮೂರಿ ಕಾಲನಿ, ಸುರಭಿ ಕ್ರಾಸ್ ಮುಖಾಂತರ ಕಣಬರಗಿ ಗ್ರಾಮದಲ್ಲಿ ಸಂಚರಿಸಿ ಕಣಬರಗಿ ಶಾಲಾ ಆವರಣದಲ್ಲಿ ಮುಕ್ತಾಯಗೊಂಡಿತು. 
ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಶಶಿಧರ ನಾಡಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಂಡಲೀಕ,  ಜಿಲ್ಲಾ ಸ್ವೀಪ್ ಸಹಾಯಕ ಅಧಿಕಾರಿ ರವಿ ಭಜಂತ್ರಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಮಿಲ್ಲಾನಟ್ಟಿ, ಬೆಳಗಾವಿ ನಗರ ಬಿಇಓ  ಬಡಿಗೇರ, ಡೈಟ್ ಪ್ರಿನ್ಸಿಪಾಲ್ ಸಿಂಧೂರ ಹಾಗೂ ಡೈಟ್ ಪ್ರಾಚಾರ್ಯ ಬಳಿಗಾರ, ಜಿಲ್ಲಾ ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಸಿ.ಬಿ. ರಂಗಯ್ಯ, ತಾಲೂಕು ಯೋಜನಾಧಿಕಾರಿ ಪಿ.ಪಿ. ದೇಶಪಾಂಡೆ, ಜಿಲ್ಲಾ ಪಂಚಾಯತ ಕಚೇರಿಯ ಲೆಕ್ಕ ಅಧೀಕ್ಷಕ ಬಸನಾಳ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ತಂಡದ ಸದಸ್ಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button