Latest

ಮಾರ್ಕೇಟ್ ಪೊಲೀಸರಿಂದ ಮೂವರು ಮನೆಗಳ್ಳರ ಬಂಧನ, 58ಗ್ರಾಮ ಚಿನ್ನ ವಶ

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಾರ್ಕೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದ್ದಾರೆ.
ಕಳೆದ ನವೆಂಬರ್ 11ರಂದು ರಾತ್ರಿ ಮಠ ಗಲ್ಲಿಯ ಮೋಹನ ಮಹಾರುದ್ರಪ್ಪ ಬಾಗೇವಾಡಿ ಎಂಬುವವರ ಮನೆ ಕಳುವು ಮಾಡಿದ್ದರು. 
ಸಲ್ಮಾನ್ ಮೊಹಮ್ಮದ್ ಅರ್ಷದ ದಲಾಯತ್, ಇಸ್ಮಾಯಿಲ್ ಇಬ್ರಾಹಿಂ ನಾಯಿಕವಾಡಿ ಹಾಗೂ ತನ್ವೀರ ಮೆಹಬೂಬ್ ದೇಶನೂರು ಬಂಧಿತರು.
 ಇವರು ಕ್ರಮವಾಗಿ ದೇಶಪಾಂಡೆ ಗಲ್ಲಿ, ಫೋರ್ಟ್ ರೋಡ್ ಹಾಗೂ ಕಲೈಗಾರ ನಿವಾಸಿಗಳಾಗಿದ್ದಾರೆ.
ಇನ್ಸಪೆಕ್ಟರ್ ವಿಜಯ ಮುರಗುಂಡಿ ನೇತೃತ್ವದಲ್ಲಿ ಎಎಸ್ ಐ ಬಿ. ಕೆ. ಮಿಟಗಾರ, ಶಿವಪ್ಪ ತೇಲಿ, ಆಸೀರ್ ಜಮಾದಾರ, ಎಂ. ಎಸ್. ಚವಡಿ ಇತರರು ಕಾರ್ಯಾಚರಣೆ ನಡೆಸಿ ಕಳೆದು ಹೋಗಿದ್ದ ಆಭರಣ 58ಗ್ರಾಂ ವಶಕ್ಕೆ ಪಡೆದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button