Latest

ಮಾ.10ರಂದು ವಸತಿ ಶಾಲೆಗಳ ಪ್ರವೇಶ ಪರೀಕ್ಷೆ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ 6 ನೇ ತರಗತಿ ಪ್ರವೇಶ ಪರೀಕ್ಷೆಗಳು ಮಾರ್ಚ 10 ರವಿವಾರದಮದು ಜರುಗಲಿವೆ.

ಮೂಡಲಗಿ ವಲಯ ವ್ಯಾಪ್ತಿಯಲ್ಲಿ ಪರೀಕ್ಷೆಗೆ 5341 ಮಕ್ಕಳು ಹಾಜರಾಗುತ್ತಿದ್ದು ಇದು ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಪ್ರವೇಶ ಬಯಸಿ ಅರ್ಜಿ ಸಲ್ಲಿಸಿರುವ ತಾಲೂಕಾಗಿದೆ ಎಂದು ದೈಹಿಕ ಪರಿವೀಕ್ಷಕ ಎಸ್.ಎ ನಾಡಗೌಡರ ಹೇಳಿದರು.
ಅವರು ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಪ್ರವೇಶ ಪರೀಕ್ಷೆಗಳ ಕುರಿತು ಮುಖ್ಯ ಅಧಿಕ್ಷಕರ ಸಭೆಯಲ್ಲಿ ಮಾತನಾಡಿದರು. ಮೂಡಲಗಿ ವಲಯ ಪ್ರತಿ ವರ್ಷದಂತೆ ಈ ವರ್ಷವು ಅತೀ ಹೆಚ್ಚು ಮಕ್ಕಳು ಪ್ರವೇಶ ಪರೀಕ್ಷೆ ಹಾಜರಾಗಲು ಅರ್ಜಿ ಸಲ್ಲಿಸಿದ್ದಾರೆ. ವಲಯ ವ್ಯಾಪ್ತಿಯಲ್ಲಿ 22 ಪರೀಕ್ಷಾ ಕೇಂದ್ರಗಳಿವೆ. ಪರೀಕ್ಷಾ ಕೇಂದ್ರದ ತಯಾರಿ, ಕೊಠಡಿ ಮೇಲ್ವಿಚಾರಕರ ನಿಯೋಜನೆ ಹಾಗೂ ಅಗತ್ಯ ಪರೀಕ್ಷಾ ಸಿದ್ದತೆಗಳನ್ನು ಕೈಗೋಳ್ಳ ಬೇಕು ಎಂದು ಹೇಳಿದರು.
ಸಭೆಯಲ್ಲಿ ಇಸಿಒ ಟಿ ಕರಿಬಸವರಾಜು, ಅಧೀಕ್ಷಕರಾದ ಗೀತಾ ಕರಗಣ್ಣಿ, ಎಸ್.ಆರ್ ಬಿದರಿ, ಎನ್.ಬಿ ನಿಪ್ಪಾನಿ, ಎಲ್ ಐ ಕೊಳವಿ, ಎಸ್.ಜಿ ವಲ್ಯಾಪೂರ, ಆರ್ ಎಸ್ ಅಳಗುಂಡಿ, ಜಿ.ಆರ್ ಪತ್ತಾರ, ಆರ್ ಬಿ ಕಳ್ಳಿಗುದ್ದಿ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button