Latest

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆನ್ನುವುದು ಜನರ ಆಸೆ -ತೇಜಸ್ವಿನಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆನ್ನುವುದು ದೇಶದ ಜನರ ಆಸೆಯಾಗಿದ್ದು, ಮಹಿಳೆಯರು ಈ ಚುನಾವಣೆಯಲ್ಲಿ ಸಕ್ರೀಯರಾಗಿ ಭಾಗಿಯಾಗುವ ಮೂಲಕ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಹೇಳಿದರು.

Home add -Advt

ಬೆಳಗಾವಿಯ ಮಿಲೇನಿಯಂ ಗಾರ್ಡನ್ ನಲ್ಲಿ ಶುಕ್ರವಾರ ಸಂಜೆ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶ ಮೊದಲು ಎನ್ನುವುದು ಬಿಜೆಪಿ ತತ್ವ. ಕಳೆದ 5 ವರ್ಷದಲ್ಲಿ ಕೇಂದ್ರದ ಬಿಜೆಪಿ ಸರಕಾರ ದೇಶದ ಒಳಗೆ ಹಾಗೂ ಹೊರಗೆ ಸಾಕಷ್ಟು ಕೆಲಸ  ಮಾಡಿದೆ. ಬಡವರಿಗೆ ಅಗ್ಗದ ದರದಲ್ಲಿ ಔಷಧ ಸೇರಿದಂತೆ ಎಲ್ಲ ವಸ್ತುಗಳು ಸಿಗುವಂತಾಗಿದೆ. ವಿದೇಶದಲ್ಲೂ ಭಾರತ ಚಿರಪರಿಚಿತವಾಗಿದೆ ಎಂದು ಅವರು ಹೇಳಿದರು.

 

ಸವಾಲುಗಳು ಬಂದಾಗ ಹೆಚ್ಚು ಕಲಿಯಲು ಸಾಧ್ಯ. ಆವಾಗಲೇ ನಾವು ಹೆಚ್ಚು ಬಲಿಷ್ಟರಾಗುತ್ತೇವೆ. ಈ ಭೂಮಿಗೆ ವಿಷಕಾರಿಯಾಗಿರುವ ಪ್ಲ್ಯಾಸ್ಟಿಕ್ ವಿರುದ್ಧ ಮಹಿಳೆಯರು ಆಂದೋಲನ ಮಾಡಬೇಕೆಂದು ಕರೆ ನೀಡಿದ ಅವರು ತಮ್ಮ ಅಧಮ್ಯ ಫೌಂಡೇಶನ್ ನಿಂದ ವ್ಯರ್ಥ ಪದಾರ್ಥ ಬಳಸಿ ಅಡುಗೆ ಮಾಡುವ ಕುರಿತು ಅರಿವು ಮೂಡಿಸುತ್ತಿರುವುದನ್ನು ವಿವರಿಸಿದರು. 

ಶಾಸಕ ಅಭಯ ಪಾಟೀಲ ಮಾತನಾಡಿ, ಅನಂತಕುಮಾರ ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ತೇಜಸ್ವಿನಿ ಅವರು ಬೆಂಗಳೂರಿನಲ್ಲಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆದರ್ಶ ಮಹಿಳೆಯಾಗಿದ್ದಾರೆ ಎಂದರು.

ಶಾಸಕ ಅನಿಲ ಬೆನಕೆ ಮಾತನಾಡಿ, ಅನಂತಕುಮಾರ, ಜಗದೀಶ ಶೆಟ್ಟರ್ , ಸುರೇಶ ಅಂಗಡಿ ಮೊದಲಾದವರಿಗೆಲ್ಲ ಅವರ ಪತ್ನಿಯರೇ ಬೆನ್ನೆಲುಬಾಗಿ ನಿಂತು ಯಶಸ್ಸಿಗೆ ಸಹಕರಿಸುತ್ತಿದ್ದಾರೆ ಎಂದರು.

ಶಿಲ್ಪಾ ಜಗದೀಶ ಶೆಟ್ಟರ್, ಮಂಗಲಾ ಅಂಗಡಿ, ರಘುಪತಿ ಭಟ್, ಎಂ.ಬಿ.ಜಿರಲಿ, ಮಂಗೇಶ ಪವಾರ ಮೊದಲಾದವರಿದ್ದರು. 

Related Articles

Back to top button