Kannada NewsLatest

ಚಿನ್ನದ ವ್ಯಾಪಾರಿಗಳ ಅಡ್ಡಗಟ್ಟಿ ನಗದು-ಬಂಗಾರ ದರೋಡೆ

ಪ್ರಗತಿವಾಹಿನಿ ಸುದ್ದಿ; ಘಟಪ್ರಭಾ: ಚಿನ್ನದ ವ್ಯಾಪಾರಿಗಳಿಬ್ಬರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು, ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಗೋಕಾಕನ ಘಟಪ್ರಭಾ ಸಕ್ಕರೆ ಕಾರ್ಖಾನೆ ಹತ್ತಿರವಿರುವ ಶಿಂಧಿಕುರಬೇಟ ಗ್ರಾಮದಲ್ಲಿ ನಡೆದಿದೆ.

ಗೋಕಾಕ್ ನಿಂದ್ ಶಿಮ್ಧಿಕುರಬೇಟ ಗ್ರಾಮಕ್ಕೆ ಬರುತ್ತಿದ್ದಾಗ ಕರಿಯಮ್ಮ ದೇವರ ಗುಡಿಯ ಹತ್ತಿರ ದಾಳಿ ನಡೆದಿದೆ. ಚಿನ್ನದ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ 8 ಜನರು ಡಕಾಯಿತರ ತಂಡ ವ್ಯಾಪಾರಿಗಳಿಂದ ಅರ್ಧ ಕೆ.ಜಿ ಬಂಗಾರ ಹಾಗೂ 2.80ಲಕ್ಷ ನಗದು ಹಣ ದರೋಡೆ ಮಾಡಿ ಪರಾರಿಯಾಗಿದೆ.

ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆಗೊಳಗಾದ ಚಿನ್ನದ ವ್ಯಾಪಾರಿಗಳು ಘಟಪ್ರಭಾದ ಕೆಎಚ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿನ್ನದ ವ್ಯಾಪಾರಿಗಳಾದ ಸಂಜೀವ ಸದಾನಂದ ಪೋತದಾರ ಮತ್ತು ಆತನ ಸಹೋದರ ರವೀಂದ್ರ ಸದಾನಂದ ಪೋತದಾರ ಗೋಕಾಕದಲ್ಲಿರುವ ತಮ್ಮ ಅಂಗಡಿ ಬಂದ್‌ ಮಾಡಿ ತಮ್ಮ ಸ್ವಗ್ರಾಮ ಶಿಂಧಿಕುರಬೇಟಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ. 8 ಜನ ದರೋಡೆಕಾರರು ಚಿನ್ನದ ವ್ಯಾಪಾರಿಗಳ ಬೈಕ್‌ ಅಡ್ಡಗಟ್ಟಿ ಅವರ ಕೈಯಲ್ಲಿರುವ ಕಸಿದುಕೊಂಡಿದ್ದಾರೆ. ವಿರೋಧಿಸಿದಾಗ ಚಿನ್ನದ ವ್ಯಾಪಾರಿಯೊಬ್ಬನ ತಲೆಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಮತ್ತೊಬ್ಬನ ಕಿವಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

Home add -Advt

ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಎಸ್ ಪಿ ಸಂಜೀವಕುಮಾರ ಪಾಟೀಲ, ಎಡಿಶನಲ್ ಎಸ್‌ಪಿ ಮಹಾನಿಂಗ ನಂದಗಾಂವಿ, ಡಿವೈಎಸ್‌ಪಿ ಬಸವರಾಜ ಎಲಿಗಾರ, ಸಿಪಿಐ ಶ್ರೀಶೈಲ ಬ್ಯಾಕೂಡ ಭೇಟಿ ನೀಡಿದ್ದರು. ಜಿಲ್ಲಾ ಶ್ವಾನದಳ ತಪಾಸಣೆ ನಡೆಸಿದೆ. ಆದರೆ ಆರೋಪಿಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲವೆಂದು ತಿಳಿದು ಬಂದಿದೆ.

ಕೊಟ್ಟ ಮಾತಿಗೆ ತಪ್ಪಿದ ಬಿಜೆಪಿ ಸರ್ಕಾರ

https://pragati.taskdun.com/latest/shiggavi-chalopanchamasaliseptember-20th-2/

Related Articles

Back to top button