Latest

ರಾಜೀನಾಮೆ ನೀಡಲು ಸಿದ್ದರಾದ ಶಾಸಕ ಮಹೇಶ ಕುಮಠಳ್ಳಿ 

 

ಪ್ರಗತಿವಾಹಿನಿ ಸುದ್ದಿ, ಅಥಣಿ

ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡಿಸುವ ವಿಚಾರದಲ್ಲಿ ಅಗತ್ಯವಾದಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲೂ ಸಿದ್ದ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಎಚ್ಚರಿಸಿದ್ದಾರೆ.

ಅಥಣಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಈಗಾಗಲೇ ಇಲ್ಲಿಯ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ  ತಂದಿದ್ದೇವೆ ಹಾಗೂ ಸರ್ಕಾರದಿಂದಲೂ ನಿರೀನ ಸಮಸ್ಯೆ ಬಗೆಹರಿಸಲು ಸಕಲ ಸಿದ್ಧತೆಗಳು ನಡೆದಿವೆ. ನಾನು ಶಾಸಕನಾಗಿ ಕೈಕಟ್ಟಿ ಕುಳಿತು ಕೊಳ್ಳುವುದಿಲ್ಲ.  ಮೊದಲು ಜನರ ಸಮಸ್ಯೆ ಪರಿಹಾರ ಆಗಬೇಕು. ಒಂದು ವೇಳೆ ನೀರಿಗಾಗಿ ರಾಜೀನಾಮೆ ನೀಡುವ ಪರಸ್ಥಿತಿ ಎದುರಾದರೆ ರಾಜೀನಾಮೆ ನೀಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸಹ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದರು. 
 ಕೃಷ್ಣಾ ನದಿಯಲ್ಲಿ ನೀರು ಬತ್ತಿದ ಕಾರಣ ಅಂತರ್ಜಲ ಕುಸಿದು ಬಾವಿ, ಬೋರವೇಲ್ ಗಳಲ್ಲಿ ನೀರಿನ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ. ಸಾರ್ವಜನಿಕರು ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಜನ ಜಾನುವಾರುಗಳು ಹನಿ ಜಲಕ್ಕೂ ಪರಿತಪಿಸುವಂತಾಗಿದೆ. 

ಮಹಾರಾಷ್ಟ್ರ ಸರಕಾರ  ಕೃಷ್ಣಾ ನದಿಗೆ ನೀರು ಬಿಡದೆ ಇರುವುದು ಹಾಗೂ ಅಥಣಿ ತಾಲೂಕಿಗೆ ಶಾಶ್ವತ ನೀರಿನ ಪರಹಾರಕ್ಕಾಗಿ ಆಗ್ರಹಿಸಿ ಅಥಣಿ ಬಂದ್ ಗೆ ಆಗ್ರಹಿಸಿ ಇಂದು ನಸುಕಿನ ಜಾವದಿಂದಲೇ ತಾಲೂಕಿನ ವಿವಿಧ ಸಂಘಟನೆಗಳು ಬಂದ್ ನಡೆಸುತ್ತಿವೆ. ಸುಮಾರು 36  ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.


ಬಸ್  ಸಂಚಾರವಿಲ್ಲದ್ದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ.  ಶಾಸಕ ಮಹೇಶ ಕುಮಠಳ್ಳಿ, ಮರುಳಶಿದ್ದ ಮಹಾಸ್ವಾಮಿಗಳು ಹಾಗೂ ಅನೇಕ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದಾರೆ. ಪತ್ರಕರ್ತರ ಸಂಘಗಳೂ ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button