ಪ್ರಗತಿವಾಹಿನಿ ಸುದ್ದಿ ಬೆಳಗಾವಿ
ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿರುವ ಬಹುಭಾಷಾ ನಟ ಪ್ರಕಾಶ್ ರೈ, ಈ ಬಾರಿ ಜನತಾ ಸರಕಾರ ಬರಲಿದೆ ಎಂದಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು, ಹೊಸ ಆರಂಭ…ಹೆಚ್ಚು ಜವಾಬ್ದಾರಿಯಿಂದ… ನಿಮ್ಮ ಬೆಂಬಲದಿಂದ ನಾನು ಬರಲಿರುವ ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರ ಯಾವುದು ಎನ್ನುವ ವಿವರವನ್ನು ಶೀಘ್ರ ತಿಳಿಸುತ್ತೇನೆ. ಈ ಬಾರಿ ಜನತೆಯ ಸರಕಾರ. ಲೋಕಸಭೆಯಲ್ಲೂ ನಾಗರಿಕರ ಧ್ವನಿ ಕೇಳಲಿದೆ ಎಂದಿದ್ದಾರೆ.
ಪ್ರಕಾಶ ರೈ ಟ್ವೀಟ್ ಗೆ ಈವರೆಗೆ 10 ಸಾವಿರ ಜನ ಲೈಕ್ ಮಾಡಿದ್ದು, 1620 ಜನ ರೀ ಟ್ವೀಟ್ ಮಾಡಿದ್ದಾರೆ. 1022 ಜನರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಲೋಕಸಭೆ ಸ್ಪರ್ಧೆಗೆ ಶುಭ ಹಾರೈಸಿದ್ದರೆ, ಇನ್ನು ಕೆಲವರು ಕಾಲೆಳೆದಿದ್ದಾರೆ. ಇದಕ್ಕಾಗಿಯೇ ಒಂದು ವರ್ಷದಂದ ಡೈಲಾಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದೀರನ್ನುವುದು ಗೊತ್ತಾಯಿತು. ನೀವೊಬ್ಬ ನಟನೆನ್ನುವುದನ್ನು ಪ್ರೂವ್ ಮಾಡಿದ್ದೀರಿ ಎಂದು ಒಬ್ಬರು ಹೇಳಿದರೆ, ಇದು 2019ರ ಗ್ರೇಟ್ ನ್ಯೂಸ್ ಎಂದು ಒಬ್ಬರು ಹೇಳಿದ್ದಾರೆ.
ಮತ್ತೊಬ್ಬ ಕೇಜ್ರಿವಾಲ್ ಎಂದು ಅನೇಕರು ಹೇಳಿದರೆ, ಭಾರತದಲ್ಲಿ ಪ್ರತಿಬಾರಿಯೂ ಜನತೆಯ ಸರಕಾರವೇ ಬರುವುದು ಎಂದ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ರಾಜಕೀಯಕ್ಕೆ ಮತ್ತೊಬ್ಬ ಜೋಕರ್ ಸೇರ್ಪಡೆ ಎಂದು ಒಬ್ಬರು ಹೇಳಿದ್ದಾರೆ. ಕನಿಷ್ಟ 10 ಮತವನ್ನಾದರೂ ಪಡೆಯುತ್ತೀರೆನ್ನುವ ವಿಶ್ವಾಸವಿದೆ ಎಂದಿದ್ದಾರೆ ಒಬ್ಬರು. ಸಿನೆಮಾದಲ್ಲಿ ನಿಮ್ಮ ಭವಿಷ್ಯ ಮುಗಿದಿದ್ದರಿಂದ ನಟನೆಗೆ ಬೇರೆ ಜಾಗ ಬೇಕಾಗಿದೆ ಎಂದು ಒಬ್ಬರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ