Latest

ವಿದ್ಯಾರ್ಥಿಗಳು ಸಮಾಜ ಕಟ್ಟುವ ಕೆಲಸ ಮಾಡಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ (ಸ್ವಾಯತ್ತ) ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕದ ವಿಶೇಷ ವಾರ್ಷಿಕ ಶಿಬಿರವನ್ನು ದತ್ತು ಗ್ರಾಮ ಮಾರಿಹಾಳದಲ್ಲಿ ಮಾ.೫ ರಂದು ಮಾರಿಹಾಳ ಗ್ರಾಪಂ ಅಧ್ಯಕ್ಷೆ ಮಹಾದೇವಿ ಅಜ್ಜಪ್ಪನವರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಥ ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳುವುದರಿಂದ ಜನರಿಗೆ ಹಲವಾರು ವಿಷಯಗಳ ಬಗ್ಗೆ ಜಾಗೃತಿ ಮೂಡುತ್ತದೆ. ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಶಿಬಿರದ ಸ್ವಯಂ ಸೇವಕರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತೇವೆ ಎಂದರು.
ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪ್ರೊ. ಎಸ್.ಜಿ. ನಂಜಪ್ಪನವರ ಮಾತನಾಡಿ, ಜಾಗತೀಕರಣ ಸಂದರ್ಭದಲ್ಲಿ ಶಿಬಿರದ ಸ್ವಯಂ ಸೇವಕರ ಸಂಖ್ಯೆ ಕ್ಷೀಣಿಸುತ್ತಿದೆ. ಸ್ವಯಂ ಸೇವಕರ ಬಗ್ಗೆ ತಿಳಿಸಿಕೊಡುವ ಕೆಲಸ ನಡೆಯಬೇಕು ಎಂದು ಹೇಳಿದರು.
ರಾಜಾಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ  ಡಾ. ವಿ.ಡಿ.ಯಳಮಲಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಜ್ಞಾನಕ್ಕೆ ಹೆಚ್ಚು ಮಹತ್ವ ಕೊಡುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ಸ್ಪರ್ಧಾ ಮನೋಭಾವದ ಜೊತೆಗೆ ಸೇವಾ ಮನೋಭಾವ ಹೊಂದಿ ಸಮಾಜ ಕಟ್ಟುವ ಕೆಲಸದಲ್ಲಿ ಭಾಗಿಯಾಗಬೇಕು. ಸಾಮಾಜಿಕ ಮೌಢ್ಯಗಳ ಬಗ್ಗೆ ರಂಗಪ್ರಯೋಗಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ನುಡಿದರು.
ಮಹಾಲಕ್ಷ್ಮಿ ಹಾಗೂ ಸಂಗಡಿಗರು  ಗೀತೆ ಹಾಡಿದರು. ಕೀರ್ತಿ ಬಶೆಟ್ಟಿ ಸ್ವಾಗತಿಸಿದರು. ಸೌರಭ ವಂದಿಸಿದರು. ಕಾರ್ತೀಕ್ ನಿರೂಪಿಸಿದರು.
ಸಂಯೋಜನಾಧಿಕಾರಿ  ಪ್ರೊ. ಎಸ್.ಎಸ್. ಅಬ್ಬಾಯಿ, ಸಹ ಶಿಬಿರಾಧಿಕಾರಿ ಪ್ರೊ.ಎಸ್.ಜಿ. ಗಲಗಲಿ, ಗ್ರಾಮಸ್ಥರು, ಮತ್ತು ಶಿಬಿರದ ಸ್ವಯಂಸೇವಕರು ಉಪಸ್ಥಿತರಿದ್ದರು.

Related Articles

Back to top button