Latest

ವೈರಲ್ ಆದ ಮನೆಯಂಗಳದ ಯಕ್ಷ ನೃತ್ಯ!

ಪ್ರಗತಿವಾಹಿನಿ ಸುದ್ದಿ, ಉಡುಪಿ:

ಯುವತಿಯೋರ್ವಳು ಮನೆಯಂಗಳದಲ್ಲಿ ಮಾಡಿದ ಯಕ್ಷನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದು, 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 

ಬಡಗುತಿಟ್ಟಿನ ಅಗ್ರಗಣ್ಯ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಡಿರುವ ಯಾರೆ ನೀನು ಭುವನ ಮೋಹಿನಿ ಎಂಬ ಹಾಡಿಗೆ ಮೆಹಂದಿ ಕಾರ್ಯಕ್ರಮದಲ್ಲಿ ಕಡೆಕಾರಿನ ಯುವ ಕಲಾವಿದೆ ಚೈತ್ರಾ ಶೆಟ್ಟಿ ಹಾಕಿದ ಭರ್ಜರಿ ಸ್ಟೆಪ್ ಯಕ್ಷಗಾನ ಪ್ರೇಮಿಗಳ ಮನಸೂರೆಗೊಂಡಿದೆ.

ಬಿಎಸ್ಸಿ ನರ್ಸಿಂಗ್ ಪದವಿ ಪಡೆದಿರುವ ಚೈತ್ರಾ ಅವರು ಮೇ 15ರಂದು ಬುಧವಾರ  ಮದುವೆಗೆ ಮುನ್ನ ನಡೆಯುವ ಮೆಹಂದಿ ಶಾಸ್ತ್ರದಲ್ಲಿ ಸಂಬಂಧಿಕರ ಒತ್ತಾಯಕ್ಕೆ ಮಣಿದು ಯಕ್ಷಗಾನದ ಹೆಜ್ಜೆ ಹಾಕಿದ್ದು, ಇದೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಚೈತ್ರಾ ಅವರು 7ನೇ ತರಗತಿಯಿಂದಲೇ ಯಕ್ಷಗಾನದ ಆಸಕ್ತಿ ಹೊಂದಿದ್ದು, ಯಕ್ಷಗುರು ರಾಜೀವ್ ತೋನ್ಸೆ ಅವರಲ್ಲಿ ಯಕ್ಷಗಾನವನ್ನು ಅಭ್ಯಾಸ ಮಾಡಿದ್ದಾರೆ.

Home add -Advt

ಅನೇಕ ಸಂಘ ಸಂಸ್ಥೆಗಳ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಆದರೆ ಸಾಂಪ್ರದಾಯಿಕ ವೇಷ ಭೂಷಣವಿಲ್ಲದೆ ಮನೆಯಂಗಳದಲ್ಲಿ ನೀಡಿದ ಯಕ್ಷಗಾನ ನಾಟ್ಯವನ್ನು ಸಾಮಾಜಿಕ ತಾಣದಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದುಎಲ್ಲರ ಕುತೂಹಲಕ್ಕೆ ಕಾರಣಳಾಗಿದ್ದಾಳೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button