ಪ್ರಗತಿವಾಹಿನಿ ಸುದ್ದಿ, ಬೆಂಗಳೂರು/ ಕಲಬುರ್ಗಿ
ಬ್ರಾಹ್ಮಣರ ವಿರುದ್ಧ ಅವಹೇಳನಕರವಾಗಿ ಮಾತನಾಡಿದ್ದಾರೆನ್ನಲಾದ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಬ್ರಾಹ್ಮಣ ಮಹಾಸಭಾ ಬೆಂಗಳೂರಿನಲ್ಲಿ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದೆ.
ಬ್ರಾಹ್ಮಣ ಮಹಾಸಭಾ ರಾಜ್ಯಧ್ಯಕ್ಷ ಕೆ.ಎನ್.ವೆಂಕಟನಾರಾಯಣ ನೇತೃತ್ವದಲ್ಲಿ ಪದಾಧಿಕಾರಿಗಳು ಇಂದು ಸಂಜೆ ಚುನಾವಣಾ ಆಯುಕ್ತರ ಕಚೇರಿಗ ತೆರಳಿ ದೂರು ಸಲ್ಲಿಸಿದರು.
ಇದೇ ವೇಳೆ ಕಲಬುರ್ಗಿಯಲ್ಲಿ ಸಹ ಬ್ರಾಹ್ಮಣ ಮಹಾಸಭಾ ಸತೀಶ್ ಜಾರಕಿಹೊಳಿ ವಿರುದ್ಧ ಸ್ಥಳೀಯವಾಗಿ ದೂರು ನೀಡಲಾಗಿದೆ. ವಲಯ ಕಾರ್ಯದರ್ಶಿ, ನ್ಯಾಯವಾದಿ ರಾಘವೇಂದ್ರ ಕುಲಕರ್ಣಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ