ಪ್ರಗತಿವಾಹಿನಿ ಸುದ್ದಿ, ಅಗಸಗಿ (ತಾ: ಬೆಳಗಾವಿ)
ಶರೀರ ಮಾಧ್ಯಮಂ ಖಲು ಧರ್ಮ ಸಾಧನಂ ಎನ್ನುವಂತೆ ಸದೃಢವಾದ ಶರೀರವಿದ್ದರೆ ಆರೋಗ್ಯವಂತರಾಗಿರುವರು. ಪಾಠದ ಜೊತೆಗೆ ಆಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ. ಕ್ರೀಡೆಯಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯಾಗುತ್ತದೆ. ಎಂದು ಕ್ರೀಡಾಭೀಷ್ಮರೆಂದು ಖ್ಯಾತರಾದ ಜಿ.ಎನ್. ಪಾಟೀಲ ಹೇಳಿದರು.
ಅಗಸಗಿಯ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ೨೦೧೮-೧೯ನೇ ಸಾಲಿನ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಾಲಾ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ. ವಿ.ಎನ್. ಕೋರಧಾನ್ಯಮಠ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಭಾರತ ಸೇವಾದಳದ ವಿದ್ಯಾರ್ಥಿನಿಯರು ಗೌರವ ವಂದನೆ ಸಲ್ಲಿಸಿದರು. ಕು. ಶಿವಾಜಿ ಡೋಣಕರಿ ಕ್ರೀಡಾಜ್ಯೋತಿಯನ್ನು ಹೊತ್ತೊಯ್ದನು. ದಾನಿಗಳಾದ ನಿರ್ವಾಣಿ ಕುರಬೇಟ, ಸಿದ್ದಪ್ಪ ಮಾಳಗಿ ಅವರನ್ನು ಗೌರವಿಸಲಾಯಿತು.
ಎಸ್.ಎಸ್. ಪದವಿ ಪೂರ್ವ ಕಾಲೇಜಿನ ದೈಹಿಕ ನಿರ್ದೇಶಕ ಪ್ರಭು ಶಿವನಾಯ್ಕರ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಎನ್.ಬಿ. ಪಾಟೀಲ ಉಸ್ತುವಾರಿ ವಹಿಸಿದ್ದರು. ಶಿಕ್ಷಕ ಬಿ.ಆರ್. ಹಿರೇಮಠ ಸ್ವಾಗತಿಸಿದರು. ಪಿ.ಐ. ಪಾಯಣ್ಣವರ ನಿರೂಪಿಸಿದರು. ವಿ.ಬಿ. ಪಾಟೀಲ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ