ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಖಾನಾಪುರ ತಾಲ್ಲೂಕಿನ ಹಿರೇಮುನವಳ್ಳಿ ಗ್ರಾಮಕ್ಕೆ ಪಕ್ಷದ ಪ್ರಚಾರಾರ್ಥ ಶನಿವಾರ ಭೇಟಿ
ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗ್ರಾಮದ ಗ್ರಂಥಾಲಯದ ಆವರಣದಲ್ಲಿ ಬಹಿರಂಗ
ಸಭೆಯನ್ನು ನಡೆಸಿದ್ದಾರೆ.
ಗ್ರಾಮದ ಗ್ರಾಮ ಪಂಚಾಯ್ತಿಯ ಗ್ರಂಥಾಲಯದ ಮುಂದೆ ಬಹಿರಂಗ ಸಭೆಯನ್ನು ಕೈಗೊಂಡು ಪಕ್ಷದ
ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನುದ್ದೇಶಿಸಿ ಸಚಿವರು ಮಾತನಾಡಿದ್ದಾರೆ. ಸರ್ಕಾರಿ
ಕಟ್ಟಡದಲ್ಲಿ ರಾಜಕೀಯ ಪಕ್ಷದ ಸಭೆಯನ್ನು ನಡೆಸುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಯೇ ಎನ್ನುವ ಸಂಶಯ ಮೂಡಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೆ, ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)