Latest

ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ  

 ಚನ್ನಮ್ಮನ ಕಿತ್ತೂರು
ಸಾಲಬಾದೆ ತಾಳಲಾರದೆ ತಾಲೂಕಿನ ಕಾದ್ರೊಳ್ಳಿ ಗ್ರಾಮದಲ್ಲಿ ರೈತನೋರ್ವ ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರುದ್ರಪ್ಪ ಚಂಬಣ್ಣ ನಾಗನೂರ(56) ಆತ್ಮಹತ್ಯೆ ಮಾಡಿಕೊಂಡ ರೈತ. ಕಳೆದ ಎರಡು ವರ್ಷಗಳಿಂದ ತನ್ನ 3 ಎಕರೆ ಜಮೀನಿನಲ್ಲಿ ಬೆಳೆ ಬಾರದೆ ರೈತ ನೊಂದಿದ್ದ. ಅಲ್ಲದೆ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಕೆ.ವಿ.ಜಿ ಬ್ಯಾಂಕಿನಲ್ಲಿ ಒಟ್ಟು 1.65 ಲಕ್ಷ ರೂ ಸಾಲಮಾಡಿಕೊಂಡಿದ್ದ. ಸಾಲ
ತೀರಿಸಲಾಗದೆ ಮನನೊಂದು ತನ್ನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತರಿಗೆ ಮೂರು ಮಕ್ಕಳು ಮತ್ತು ಪತ್ನಿಇದ್ದಾರೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button