Latest

ಸಾಹಿತ್ಯ ಜಾತ್ರೆಗೆ ಸಿಂಗಾರಗೊಂಡ ಧಾರವಾಡ: ಜ.4ರಿಂದ 3 ದಿನ ಸಾಹಿತ್ಯ ಸಮ್ಮೇಳನ

 

 

   ಪ್ರಗತಿವಾಹಿನಿ ಸುದ್ದಿ, ಧಾರವಾಡ

ಇದೇ 4ರಿಂದ 6ರ ವರೆಗೆ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧಾರವಾಡ ನಗರ ಸಿಂಗಾರಗೊಂಡಿದೆ.

ನಗರದ ಎಲ್ಲಿ ನೋಡಿದರೂ ಬಣ್ಣ ಬಣ್ಣದ ತೋರಣಗಳನ್ನು ಕಟ್ಟಲಾಗಿದ್ದು, ಗೋಡೆಗಳು ನಾಡಿನ ಇತಿಹಾಸ, ಕಲೆ, ಸಂಸ್ಕೃತಿ ಸಾರುವ ಚಿತ್ರಗಳಿಂದ ರಾರಾಜಿಸುತ್ತಿದೆ. ಧಾರವಾಡಕ್ಕೆ ಸೇರುವ ಎಲ್ಲ ರಸ್ತೆಗಳೂ ಸಿಂಗಾರಗೊಂಡಿದ್ದು, ಸಾಹಿತ್ಯ ಸಮ್ಮೇಳನ ಇನ್ನೂ 2 ದಿನ ಇರುವಾಗಲೆ ಮದುವಣಗಿತ್ತಿಯಂತೆ ಕಾಣುತ್ತಿದೆ. ರಸ್ತೆ ಬದಿಯಲ್ಲಿರುವ ಸರಕಾರ ಕಟ್ಟಡ, ಕಂಪೌಂಡ್ ಗೋಡೆಗಳಿಗೆ ಕೆಂಪು, ಹಳದಿ ಬಣ್ಣಗಳನ್ನು ಬಳಿಯಲಾಗಿದೆ. 

ಸಮ್ಮೇಳನ ಸಿದ್ಧತೆಗೆ ವಿವಿಧ ಸಮಿತಿಗಳನ್ನು ಮಾಡಲಾಗಿದ್ದು, ಈಗಾಗಲೆ ಕಾರ್ಯಕ್ರಮದ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ. ನಾಡಿನ ಎಲ್ಲ ಭಾಗಗಳಿಂದ ಸಾಹಿತಿಗಳು, ಸಾಹಿತ್ಯಾಸಕ್ತರು ಧಾರವಾಡದತ್ತ ಆಗಮಿಸಲಿದ್ದಾರೆ.

ಈ ಮಧ್ಯೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಆಗಮಿಸುವವರಿಗಾಗಿ ಧಾರವಾಡದಿಂದ ಸುತ್ತಲಿನ ಪ್ರದೇಶಗಳಿಗೆ ಪ್ರವಾಸಕ್ಕಾಗಿ ಬಸ್ ಗಳನ್ನು ವ್ಯವಸ್ಥೆ ಮಾಡಿದೆ. 4 ಪ್ಯಾಕೇಜ್ ಟೂರ್ ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 7.30ಕ್ಕೆ ಹೊರಡುವ ಬಸ್ ಗಳು ಸಂಜೆ 7 ಗಂಟೆಗೆ ಮರಳಿ ಬರಲಿವೆ. ಆದರೆ ಸಾಹಿತ್ಯ ಸಮ್ಮೇಳನಕ್ಕಾಗಿ ಬರುವ ಜನರು ಪ್ರವಾಸಕ್ಕೆ ತೆರಳುತ್ತಾರೆಯೇ? ಈ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸುವ ಬದಲು ಪ್ಯಾಕೇಜ್ ಟೂರ್ ಮಾಡುವುದು ಎಷ್ಟು ಸರಿ ಎನ್ನುವುದು ಸಾಹಿತ್ಯಾಸಕ್ತರ ಪ್ರಶ್ನೆಯಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button