Kannada NewsLatestNational

ವಿಮಾನದಲ್ಲಿ ಅಪ್ತಾಪ್ತ ಬಾಲಕಿ ಎದುರು ಹಸ್ತಮೈಥುನ; ಭಾರತೀಯ ಮೂಲದ ವೈದ್ಯನ ಬಂಧನ

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ವಿಮಾನದಲ್ಲಿ ಅಪ್ರಾಪ್ತ ಬಾಲಕಿ ಎದುರೇ ಹಸ್ತಮೈಥುನ ಮಾಡಿಕೊಂಡ ಭಾರತೀಯ ಮೂಲದ ವೈದ್ಯನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.

ಹೊನೊಲುಲುವಿನಿಂದ ಬೋಸ್ಟನ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು ಡಾ. ಸುದೀಪ್ತ ಮೊಹಂತಿ ಬಂಧಿತ. ಬೋಸ್ಟನ್‌ನ ಬೆತ್ ಇಸ್ರೇಲ್ ಡೀಕಾನೆಸ್ ಮೆಡಿಕಲ್ ಸೆಂಟರ್‌ನಲ್ಲಿ ಪ್ರಾಥಮಿಕ ಚಿಕಿತ್ಸಾ ವೈದ್ಯನಾಗಿರುವ ಡಾ. ಮೊಹಂತಿ ಅವರು ವಿಮಾನದಲ್ಲಿ ಅವರು 14 ವರ್ಷದ ಬಾಲಕಿ ಪಕ್ಕ ಕುಳಿತಿದ್ದರು. ಅವರು ಬೆಡ್​ಶೀಟ್​ನ್ನು ಹೊದ್ದುಕೊಂಡಿದ್ದರು, ಬಳಿಕ ಬೆಡ್​ಶೀಟ್​ ಕೆಳಗೆ ಬಿದ್ದಾಗ ಅವರು ಹಸ್ತಮೈಥುನ ಮಾಡಿಕೊಳ್ಳುತ್ತಿರುವುದು  ಗಮನಕ್ಕೆ ಬಂದು ಬಾಲಕಿ ಮುಜುಗರದಿಂದ ಬೇರೆ ಸೀಟ್ ನಲ್ಲಿ ಹೋಗಿ ಕುಳಿತಿದ್ದಾಳೆ.

Home add -Advt

ಬೋಸ್ಟನ್ ನಲ್ಲಿ ವಿಮಾನ ಇಳಿದಾಗ ಬಾಲಕಿ ತನ್ನ ಪಾಲಕರಿಗೆ ವಿಷಯ ತಿಳಿಸಿದ್ದಾಳೆ. ಪಾಲಕರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದ ನಂತರ ಡಾ. ಮೊಹಂತಿ ಅವರನ್ನು ತನಿಖೆಗೆ ಒಳಪಡಿಸಲಾಯಿತು. ಆದರೆ ಆರಂಭದಲ್ಲಿ ಆರೋಪಗಳನ್ನು ನಿರಾಕರಿಸಿದ ಡಾ. ಮೊಹಂತಿ ಗುರುವಾರ ಫೆಡರಲ್ ನ್ಯಾಯಾಲಯಕ್ಕೆ ಹಾಜರಾದರು.

Related Articles

Back to top button