ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸೊಲ್ಲಾಪುರದಲ್ಲಿ ಕೆಎಲ್‌ಇ ಸಂಸ್ಥೆಯ ಅಪ್ಪಣ್ಣಾ ಕಾಡಾದಿ ಹೈಸ್ಕೂಲಿನ 81ನೇ ವಾರ್ಷಿಕೋತ್ಸವ ಸೋಮವಾರ ನಡೆಯಲಿದೆ.
ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೇಂದ್ರದ ಮಾಜಿ ಗೃಹ ಸಚಿವ ಸುಶೀಲ ಕುಮಾರ ಶಿಂಧೆ ಆಗಮಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಮಹಾರಾಷ್ಟ್ರ ಸರ್ಕಾರದ ಲೋಕೋಪಯೋಗಿ, ಸಾರಿಗೆ, ಕಾರ್ಮಿಕ, ಜವಳಿ ಖಾತೆ ಸಚಿವರು ಹಾಗೂ ಸೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ವಿಜಯಕುಮಾರ ದೇಶಮುಖ, ಮಹಾರಾಷ್ಟ್ರ ಸರ್ಕಾರದ ಸಹಕಾರ, ಮಾರುಕಟ್ಟೆ ಹಾಗೂ ಜವಳಿ ಖಾತೆ ಸಚಿವರಾದ ಸುಭಾಷ ಎಸ್. ದೇಶಮುಖ, ಸಂಸದರಾದ ಶರದ್ ಬನ್ಸೋಡೆ, ಅಕ್ಕಲಕೋಟ ಶಾಸಕರು ಹಾಗೂ ರಾಜ್ಯ ಮಾಜಿ ಗೃಹ ಸಚಿವರಾದ ಸಿದ್ಧರಾಮ ಮೇತ್ರೆ, ಕಾಡಾದಿ ಟ್ರಸ್ಟ್‌ನ ಶಿವಶಂಕರ ಕಾಡಾದಿ, ರಾಜ್ಯಸಭಾ ಸದಸ್ಯರು ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಅವರು ಆಗಮಿಸಲಿದ್ದಾರೆಂದು ಕೆಎಲ್‌ಇ ಸಂಸ್ಥೆಯ ಉಪಕಾರ್ಯಾಧ್ಯಕ್ಷ ಅಶೋಕಣ್ಣಾ ಬಾಗೇವಾಡಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ