Latest

ಹುಕ್ಕೇರಿ ಹಿರೇಮಠದಲ್ಲಿ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಂಗಳೂರಿನ ವಿಭೂತಿಪುರದ ವೀರಸಿಂಹಾಸನ ಸಂಸ್ಥಾನ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಮಠಗಳಲ್ಲಿ ದಾಸೋಹ ಪದ್ಧತಿ ಬೆಳೆದು ಬಂದಿರುವುದರಿಂದ  ಅನೇಕ ಬಡ ಮಕ್ಕಳಿಗೆ ಅನುಕೂಲವಾಗಿದೆ. ಮಠಗಳು ದೇಶೀಯ ಪರಂಪರೆಯನ್ನು ಎತ್ತಿ ಹಿಡಿಯುತ್ತಿವೆ ಎಂದರು.
ಹುಕ್ಕೇರಿಯ ಹಿರೇಮಠದಲ್ಲಿ ಸಾವಿರಾರು ಮಕ್ಕಳು ಸಂಸ್ಕೃತ-ವೇದಗಳನ್ನು ಕಲಿತು ಭಾರತೀಯ ಸನಾತನ ಪರಂಪರೆಯನ್ನು ಬೆಳೆಸುತ್ತಿದ್ದಾರೆ. ಹುಕ್ಕೇರಿ ಮಠ ನಡೆಸುತ್ತಿರುವ ಅಕ್ಷರ ದಾಸೋಹ ಪ್ರಶಂಸಾರ್ಹವಾಗಿದ್ದು, ಯುವ ಮಠಾಧೀಶರಿಗೆ ಆದರ್ಶವಾಗಿದೆ ಎಂದೂ ಅವರು ಹೇಳಿದರು. 

Related Articles

Back to top button