.
ಉದ್ಭವ್ ಠಾಕ್ರೆ ಬಣದ ಮುಖ್ಯಸ್ಥ ಸಂಜಯ್ ರಾವತ್ ರ ಗಂಭೀರ ಆರೋಪ. ರಾಜಕೀಯ ವಲಯ ತಲ್ಲಣ !
ಪ್ರಗತಿವಾಹಿನಿ ಸುದ್ದಿ, ಮುಂಬೈ: ಶಿವ ಸೇನಾ ಪಕ್ಷದ ಚಿಹ್ನೆಯನ್ನು ಪಡೆಯುವ ಗುದ್ದಾಟದಲ್ಲಿ ಹಾಲ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ಜಯ ದೊರೆತಿದ್ದು, ಉದ್ಭವ್ ಠಾಕ್ರೆ ಬಣವು ಕೆಂಡಾಮಂಡವಾಗಿದೆ.
ಇದರ ನಡುವೆ ಶಿಂಧೆ ಬಣದ ಮೇಲೆ ಆರೋಪಗಳ ಸುರಿ ಮಳೆಯೇ ನಡೆದಿದೆ. ಉದ್ಭವ್ ಠಾಕ್ರೆಯಂತೂ ಚುನಾವಣಾ ಆಯೋಗದ ಮೇಲೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದನ್ನು ಕಂಡಿದ್ದೇವೆ. ಚುನಾವಣಾ ಆಯೋಗವು ಮೋದಿಯವರ ಕೈಗೊಂಬೆಯಾಗಿದೆ ಎಂದು ಹೇಳಿದ್ದನ್ನು ಸ್ಮರಿಸಬಹುದು.
ಈ ವಿಷಯ ಕುರಿತಾಗಿ ಇಂದು ಸಂಜಯ್ ರಾವತ್ “ಬಿಲ್ಲು ಬಾಣ ಚಿಹ್ನೆ ಪಡೆಯಲು ₹ 2000 ಕೋಟಿ ನೀಡಲಾಗಿದೆ” ಎಂದು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಇದು ಪ್ರಾಥಮಿಕ ವರದಿ. ಸತ್ಯ ಇಷ್ಟರಲ್ಲೇ ಬಹಿರಂಗಗೊಳ್ಳಲಿದೆ ಎಂದೂ ಹೇಳಿದ್ದಾರೆ. ಅಲ್ಲದೇ ಉದ್ಭವ್ ಠಾಕ್ರೆ ಯವರು ಪ್ರಧಾನ ಮಂತ್ರಿ ಕಛೇರಿ ಹಾಗೂ ಚುನಾವಣಾ ಆಯೋಗಕ್ಕೆ ಟ್ಯಾಗ್ ಮಾಡಿ, ಸಂಜಯ್ ರಾವತ್ ಅವರ ಆರೋಪವನ್ನು ಟ್ವೇಟ್ ಮಾಡಿದ್ದಾರೆ. ಈ ಆರೋಪದ ಹಿಂದೆ ಸಾಕ್ಷಿ ತಂದಿಡುವ ಠಾಕ್ರೆ ಬಣದ ಕೆಲಸ ಸಾಧ್ಯವಾಗುತ್ತದೆಯೇ ಕಾದು ನೋಡಬೇಕು.
ಬಾರಾಮತಿ: ಚಿಹ್ನೆ ವಿಚಾರವಾಗಿ ಇಂದು ಬಾರಾಮತಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರೂವಾರಿ ಶರದ್ ಪವಾರ್ ಬಳಿ ಪ್ರಶ್ನೆ ಕೇಳಿದಾಗ, ಇದರ ವಿಚಾರದಲ್ಲಿ ಭಾಗವಹಿಸಲಾರೆ. ಆದರೆ ಉದ್ಭವ್ ಠಾಕ್ರೆ ಹೊಸ ಚಿಹ್ನೆ ಸ್ವೀಕಾರ ಮಾಡಿದಲ್ಲಿ, ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲವೆಂಬ ಅಭಿಪ್ರಾಯ ಹೊರಹಾಕಿದರು. ಶಿಂಧೆ ಬಣವು ಬಿಲ್ಲು ಬಾಣದ ಗುರುತನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉದ್ಭವ್ ಠಾಕ್ರೆ ಬಣಕ್ಕೆ ಟಾರ್ಚ್ ಗುರುತು ದೊರೆತಿದೆ.
https://pragati.taskdun.com/shivaji-maharaj396th-jayantyutsavacm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ