Belagavi NewsBelgaum NewsKannada NewsKarnataka NewsNational

*ಯಲ್ಲಮ್ಮ ದೇವಸ್ಥಾನದಲ್ಲಿ 50 ದಿನದಲ್ಲಿ 1.96ಕೋಟಿ ಕಾಣಿಕೆ ಸಂಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ,ಮಹಾರಾಷ್ಟ್ರ ಹಾಗೂ ಗೋವಾ ಸೇರಿದಂತೆ ವಿವಿಧೆಡೆ ಭಕ್ತರನ್ನು ಹೊಂದಿರುವ ಸವದತ್ತಿ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಕೇವಲ 50 ದಿನಗಳಲ್ಲಿ ಬರೋಬ್ಬರಿ 1.96ಕೋಟಿ ಕಾಣಿಕೆ ಸಂಗ್ರಹವಾಗಿದೆ‌.

ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಏಪ್ರಿಲ್‌ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ಹಾಕಿದ್ದ ಭಕ್ತರ ಕಾಣಿಕೆ ಎಣಿಕೆ ಬುಧುವಾರ ರಾತ್ರಿ ಮುಕ್ತಾಯವಾಗಿದೆ‌‌. 50 ದಿನಗಳಲ್ಲಿ ಒಟ್ಟು 1.96 ಕೋಟಿ ರೂ. ಕಾಣಿಕೆ‌ ಸಂಗ್ರಹವಾಗಿದೆ. ಅದರಲ್ಲಿ 1.71 ಕೋಟಿ ನಗದು, 20.44 ಲಕ್ಷ ಮೌಲ್ಯದ ಚಿನ್ನಾಭರಣ, 4.44 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾಗಿದೆ.

Home add -Advt

ಶಕ್ತಿ ಯೋಜನೆಯಿಂದ ಯಲ್ಲಮ್ಮನ ಗುಡ್ಡಕ್ಕೆ ಬರುವ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಹಾಗಾಗಿ  ದಾಖಲೆ ಪ್ರಮಾಣದಲ್ಲಿ ದೇಣಿಗೆ ಸಂಗ್ರಹವಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಪಿಬಿ ಮಹೇಶ ಮಾಹಿತಿ ನೀಡಿದರು.

------WebKitFormBoundary5yrxDbqHuA2UeYKLS����

Related Articles

Back to top button