ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ವಿದ್ಯಾರ್ಥಿನಿ ಋತು ಜಿ. ಮುರಗೋಡ ಸೆ. ೨೭ ಮತ್ತು ೨೮ ರಂದು ಜಿ.ಆಯ್. ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ನಿಪ್ಪಾಣಿಯಲ್ಲಿ ನಡೆದ ಅಂತರ್ ಕಾಲೇಜು ಈಜು ಸ್ಪರ್ಧೆಗಳಲ್ಲಿ ಒಟ್ಟು ೧೦ ಚಿನ್ನ, ೨ ಬೆಳ್ಳಿ ಪದಕಗಳನ್ನು ಪಡೆದಿದ್ದಾಳೆ.
ಎಲ್.ಪಿ. ವಿಶ್ವವಿದ್ಯಾಲಯ ಜಲಂದರ್‌ದಲ್ಲಿ ೦೬ ರಿಂದ ೦೮ ನವೆಂಬರ್ ೨೦೧೯ ರಂದು ನಡೆಯಲಿರುವ ಅಖಿಲ ಭಾರತ ವಿಶ್ವವಿದ್ಯಾಲಯ ಬ್ಲ್ಯೂ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಈಜು ಸ್ಪರ್ಧೆಗಳ ವಿವರ-
೫೦ಮೀ ಫ್ರೀ ಸ್ಟೈಲ್ – ಚಿನ್ನ, ೧೦೦ಮೀ ಫ್ರೀ ಸ್ಟೈಲ್ – ಚಿನ್ನ, ೨೦೦ಮೀ ಫ್ರೀ ಸ್ಟೈಲ್ – ಚಿನ್ನ, ೪೦೦ಮೀ ಫ್ರೀ ಸ್ಟೈಲ್ – ಚಿನ್ನ, ೫೦ಮೀ ಬ್ಯಾಕ್ ಸ್ಟ್ರೋಕ್ – ಚಿನ್ನ, ೧೦೦ಮೀ ಬ್ಯಾಕ್ ಸ್ಟ್ರೋಕ್ – ಚಿನ್ನ, ೨೦೦ಮೀ ಬ್ಯಾಕ್ ಸ್ಟ್ರೋಕ್ – ಚಿನ್ನ, ೫೦ಮೀ ಬ್ರೀಸ್ಟ್ ಸ್ಟ್ರೋಕ್ – ಬೆಳ್ಳಿ, ೧೦೦ಮೀ ಬ್ರೀಸ್ಟ್ ಸ್ಟ್ರೋಕ್ – ಚಿನ್ನ, ೨೦೦ಮೀ ಬ್ರೀಸ್ಟ್ ಸ್ಟ್ರೋಕ್ – ಚಿನ್ನ, ೫೦ಮೀ ಬಟರ್ ಪ್ಲೈ – ಬೆಳ್ಳಿ, ೨೦೦ಮೀ ವಯಕ್ತಿಕ ಮೆಡಲ್ – ಚಿನ್ನ.
ವಿದ್ಯಾರ್ಥಿನಿಯ ಕ್ರೀಡಾ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ