
ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: 7ನೇ ತರಗತಿ ವಿದ್ಯಾರ್ಥಿಗೆ ದುಷ್ಕರ್ಮಿಗಳು ಚಿತ್ರಹಿಂಸೆ ನೀಡಿ ಘೋರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರ್ಗಿಯ ಜೇವರ್ಗಿಯಲ್ಲಿ ನಡೆದಿದೆ.
7ನೇ ತರಗಿತಿ ಓದುತ್ತಿದ್ದ 14 ವರ್ಷದ ಮಹೇಶ್ ಎಂಬಾತ ಮೃತ ವಿದ್ಯಾರ್ಥಿ. ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕ ಈಗ ಭೀಮಾ ನದಿ ದಡದಲ್ಲಿ ಶವಾಗಿ ಪತ್ತೆಯಾಗಿದ್ದಾನೆ.
ಪೊಲೀಸರ ಪ್ರಕಾರ ಬಾಲಕನಿಗೆ ಬಲವಂತದಿಂದ ಮದ್ಯ ಕುಡಿಸಿ ಬಳಿಕ ಬಾಲಕನ ಮೂಗು, ಮರ್ಮಾಂಗವನ್ನು ಕತ್ತರಿಸಿ ಹಲ್ಲುಗಳನ್ನು ಕಿತ್ತು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ. ನಂತರ ಬಾಲಕನ ಶವವನ್ನು ಗೋಣಿಚೀಲದಲ್ಲಿ ತುಂಬಿ ಭೀಮಾನದಿಗೆ ಬಿಸಾಕಿದ್ದಾರೆ. ಕೆಲ ದಿನಗಳ ಹಿಂದೆ ಬಾಲಕ ಅನ್ಯಕೋಮಿನ ಬಾಲಕಿಗೆ ಮೊಬೈಲ್ ಕೊಡಿಸಿದ್ದ ಆಕೆಯೊಂದಿಗೆ ಸ್ನೇಹದಿಂದ ಇದ್ದುದೇ ಕೃತ್ಯಕ್ಕೆ ಕಾರಣವಿರಬಹುದು ಎನ್ನಲಾಗಿದೆ.
ಬಾಲಕಿ ಮನೆಯವರ ವಿರುದ್ಧ ಬಾಲಕನ ಮನೆಯವರು ದೂರು ನೀಡಿದ್ದು, ತನಿಖೆ ಮುಂದುವರೆದಿದೆ.