Belagavi NewsBelgaum NewsKannada NewsKarnataka News

*ಬೆಳಗಾವಿ ವಾಣಿಜ್ಯೋದ್ಯಮ ಸಂಘಕ್ಕೆ 10 ಜನರು ಅವಿರೋಧ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಬೆಳಗಾವಿ ವಾಣಿಜ್ಯೋದ್ಯಮ ಸಂಘದ (ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್) ಆಡಳಿತ ಮಂಡಳಿಗೆ 10 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಟ್ರೇಡ್ ಸೆಕ್ಟರ್ ನ ಆಜೀವ ಸದಸ್ಯರ 5 ಸ್ಥಾನ ಮತ್ತು ಸಾಮಾನ್ಯ ಸದಸ್ಯರ ಒಂದು ಸ್ಥಾನಕ್ಕೆ, ಇಂಡಸ್ಟ್ರೀಯಲ್ ಸೆಕ್ಟರ್ ನ ಆಜೀವ ಸದಸ್ಯರ 3 ಸ್ಥಾನ ಮತ್ತು ಸಾಮಾನ್ಯ ಸದಸ್ಯರ 1 ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿತ್ತು. 

ಒಟ್ಟೂ 12 ಜನರು ನಾಮಪತ್ರ ಸಲ್ಲಿಸಿದ್ದರು. ಸೋಮವಾರ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಅಂತಿಮ ದಿನವಾಗಿತ್ತು. ಟ್ರೇಡ್ ಸೆಕ್ಟರ್ ನ ಓರ್ವ ಹಾಗೂ ಇಂಡಸ್ಟ್ರಿಯಲ್ ಸೆಕ್ಟರ್ ನ ಓರ್ವ ಅಭ್ಯರ್ಥಿ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಉಳಿದವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಗಳು ಪ್ರಕಟಿಸಿದರು. 

ಎಂ.ಕೆ.ಹೆಗಡೆ, ಅಪ್ಪಾಸಾಹೇಬ ಗುರವ್, ರೋಹಿತ್ ಕಪಾಡಿಯಾ, ಸಚಿನ್ ಹಂಗಿರಗೇಕರ್, ವಿಜಯ ದರಗಶೆಟ್ಟಿ ಟ್ರೇಡಿಂಗ್ ಸೆಕ್ಟರ್ ನ ಆಜೀವ ಸದಸ್ಯ ಕ್ಷೇತ್ರಕ್ಕೆ ಅವಿರೋಧವಾಗಿ ಆಯ್ಕೆಯಾದರು.  

ಇಂಡಸ್ಟ್ರಿಯಲ್ ಸೆಕ್ಟರ್ ನ ಆಜೀವ ಸದಸ್ಯ ಕ್ಷೇತ್ರಕ್ಕೆ ದಯಾನಂದ ನೇತಲಕರ್, ಸಚಿನ್ ಸಬ್ನಿಸ್, ವಿನಿತ್ ಹರಕುಣಿ ಆಯ್ಕೆಯಾದರು. ಟ್ರೇಡ್ ಸೆಕ್ಟರ್ ನ ಸಾಮಾನ್ಯ ಕ್ಷೇತ್ರಕ್ಕೆ ಸುಧೀರ್ ಚೌಗಲೆ ಮತ್ತು ಇಂಡಸ್ಟ್ರಿಯಲ್ ಸೆಕ್ಟರ್ ನ ಸಾಮಾನ್ಯ ಕ್ಷೇತ್ರಕ್ಕೆ ಬಸವರಾಜ ರಾಮಪುರೆ ಆಯ್ಕೆಯಾದರು. 

ಟ್ರೇಡಿಂಗ್ ಸೆಕ್ಟರ್ ಗೆ ಪ್ರವೀಣ ರಂಗೋಲೆ ಮತ್ತು ಇಂಡಸ್ಟ್ರಿಯಲ್ ಸೆಕ್ಟರ್ ಗೆ ಪ್ರವೀಣ ಪರಮಶೆಟ್ಟಿ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button