ಪ್ರಗತಿವಾಹಿನಿ ಸುದ್ದಿ, ಗಾಂಧಿನಗರ: ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿ ಲಾಭ ಹೊಡೆಯುವ ಪ್ರವೃತ್ತಿಯ ಜನರಿಗೆ ಕಡಿವಾಣ ಹಾಕುವ ಕಠಿಣ ಕಾನೂನೊಂದು ಜಾರಿಯಾಗಿದೆ.
ಗುಜರಾತ್ ಪಬ್ಲಿಕ್ ಎಕ್ಸಾಮಿನೇಷನ್ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಮಸೂದೆ, 2023 ಅನ್ನು ಗುಜರಾತ್ ರಾಜ್ಯ ವಿಧಾನಸಭೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಂಗೀಕರಿಸಲಾಗಿದೆ.
ಈ ಕಾಯಿದೆಯಡಿಯಲ್ಲಿ ಅಪರಾಧಕ್ಕಾಗಿ ಶಿಕ್ಷೆಗೊಳಗಾದ ಪರೀಕ್ಷಾರ್ಥಿಯು ಎರಡು ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಪರೀಕ್ಷೆಯಿಂದ ಡಿಬಾರ್ ಆಗುತ್ತಾನೆ. ಕಾಯ್ದೆ ಪ್ರಕಾರ ಪ್ರಶ್ನೆ ಪತ್ರಿಕೆ ಸೋರಿಕೆಗೆ 1 ಕೋಟಿ ರೂ. ದಂಡ ಹಾಗೂ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಪಿಡುಗಿನಂತೆ ಆಗಿರುವ ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕುವಲ್ಲಿ ಈಗಿದ್ದ ಕಾನೂನುಗಳು ಪರಿಣಾಮಕಾರಿಯಾಗಿಲ್ಲ. ಆದರೆ ಇದೀಗ ಗುಜರಾತ್ ಮಾದರಿ ಕಾನೂನು ಕ್ರಮ ಇತರ ರಾಜ್ಯಗಳಿಗೂ ಮಾದರಿಯಾಗುವಂತಿದೆ.
ರಮೇಶ ಜಾರಕಿಹೊಳಿ ಸುತ್ತ ಆಕಾಂಕ್ಷಿಗಳ ದಂಡು; ಮಾಜಿ ಸಚಿವರ ಕೈಗೇ ಈ ಬಾರಿ ಬಿಜೆಪಿ ಬಿ ಫಾರ್ಮ್?
https://pragati.taskdun.com/crowd-of-aspirants-around-ramesh-jarakiholi-bjp-b-form-in-the-hands-of-former-minister/
ಅಪಘಾತಕ್ಕೆ ಬಲಿಯಾದವರೆಲ್ಲ ಅಗ್ನಿ ವೀರ್ ನನ್ನು ಬೀಳ್ಕೊಡಲು ಹೊರಟವರು
https://pragati.taskdun.com/all-the-victims-of-the-accident-were-going-to-farewell-to-agni-veer/
ಪಂಚಮಹಾಭೂತಗಳು ಇಲ್ಲದೇ ಯಾರೂ ಬದುಕುವುದಕ್ಕೆ ಸಾಧ್ಯವಿಲ್ಲ – ರಾಜ್ಯಪಾಲ ತಾವರಚಂದ್ ಗೆಹ್ಲೋಟ್
https://pragati.taskdun.com/no-one-can-live-without-panchamahabhuta-governor-tawarchand-gehlot/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ