Kannada NewsKarnataka NewsLatest
ಬೆಳಗಾವಿಯಲ್ಲಿ ಬುಧವಾರದಿಂದ 1000 ರೂ. ದಂಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ 1000 ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸುವ ನೂತನ ನಿಯಮವನ್ನು ರಾಜ್ಯ ಸರಕಾರಿ ಅಕ್ಟೋಬರ್ 1ರಿಂದ ಜಾರಿಗೊಳಿಸಿದೆ.
ಈ ನಿಯಮವನ್ನು ಬೆಳಗಾವಿ ಮಹಾನಗರದಲ್ಲಿ ಬುಧವಾರ (7-10-2020) ದಿಂದ ಜಾರಿಗೊಳಿಸಲು ಪೊಲೀಸ್ ಆಯುಕ್ತಾಲಯ ನಿರ್ಧರಿಸಿದೆ. ಈ ಕುರಿತು ಪೊಲೀಸ್ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.
ಬುಧವಾರದಿಂದ ಮಾಸ್ಕ್ ಧರಿಸದೆ ಹೊರಗೆ ಹೋದಲ್ಲಿ ಒಂದು ಸಾವಿರ ರೂ. ದಂಡ ಕಟ್ಟುವುದು ಅನಿವಾರ್ಯವಾಗಲಿದೆ. ಹಾಗಾಗಿ ಮನೆಯಿಂದ ಹೊರಡುವ ಮುನ್ನ ಸರಿಯಾಗಿ ಪರಿಶೀಲಿಸಿಕೊಳ್ಳಿ. ಮಾರ್ಗ ಮಧ್ಯೆ ಒಂದು ಮಾಸ್ಕ್ ಬಿದ್ದು ಹೊದಲ್ಲಿ ಬಳಸಿಕೊಳ್ಳಲು ಇನ್ನೊಂದನ್ನು ರಿಸರ್ವ್ ಇಟ್ಟುಕೊಳ್ಳುವುದೂ ಒಳ್ಳೆಯದೇ.




