
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆಯುಷ್ ಇಲಾಖೆ ಮತ್ತು ಆಯ್ಎಮ್ಆರ್ ಎನ್ಆಯ್ಟಿಎಮ್ ಹಾಗೂ ವಿವಿಧ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಮಂಗಳವಾರ (ಸೆ.23) ನಗರದ ಶಿವಬಸವ ನಗರದಲ್ಲಿರುವ ಕೆಪಿಟಿಸಿಎಲ್ ಹಾಲ್ನಲ್ಲಿ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಜರುಗಿತು.
ಹಿರಿಯ ವೈಜ್ಞಾನಾಧಿಕಾರಿ ಡಾ. ಜ್ಯೋತಿ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಶ್ರೀಕಾಂತ್ ಸುಣದೊಳ್ಳಿ,, ಹರ್ಷ ಹೆಗಡೆ, ಡಾ. ಕುಬೇರ ನಾಯಕ್, ಡಾ. ಗಿರೀಶ್ ಹೊಳೆಯನ್ನವರ, ಡಾ. ಗಿರೀಶ್ ಪಶುಪತಿಮಠ, ಶ್ರೀಮಂತ್ ಸಿಂಗೆ, ಪೌರಕಾರ್ಮಿಕರು ಸೇರಿದಂತೆ ವಿವಿಧ ಆಯುರ್ವೇದ ಕಾಲೇಜು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.