Latest

*ಶಿಕ್ಷಕನ ಮಗನನ್ನೇ ಅಪಹರಿಸಿದ ದುಷ್ಕರ್ಮಿಗಳು; ಇಬ್ಬರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಸರ್ಕಾರಿ ಶಾಲಾ ಶಿಕ್ಷಿಕ್ಷಕನ ಮಗ 10 ವರ್ಷದ ಬಾಲಕನನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಅರುಣ್ ಭಜಂತ್ರಿ, ಲಕ್ಷ್ಮಣ ಭಜಂತ್ರಿ ಎಂದು ಗುರುತಿಸಲಾಗಿದೆ. ಆರೋಪಿಗಳು ಕಲಬುರ್ಗಿ ನಗರದ ಸಂತ್ರಸವಾಡಿ ನಿವಾಸಿಗಳು.

ಕಲಬುರ್ಗಿಯ ಸಿದ್ದೇಶ್ವರ ಕಾಲೋನಿ ನಿವಾಸಿ, ಸರ್ಕಾರಿ ಶಾಲಾ ಶಿಕ್ಷಕ ಗುರುನಾಥ್ ರಾಠೋಡ್ ಎಂಬುವವರ 10 ವರ್ಷದ ಬಾಲಕ ಸುದರ್ಶನ್ ನನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದರು. ಎರಡು ದಿನಗಳ ಹಿಂದೆ ಶಾಲೆಗೆ ಹೋಗಲು ಬಸ್ ಗಾಗಿ ಕಾಯುತ್ತಿದ್ದಾಗ ಆಟೋದಲ್ಲಿ ಬಂದ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಬಾಲಕನನ್ನು ಅಪಹರಿಸಿದ್ದರು. ಬಳಿಕ 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಟ್ಟರೆ ಬಾಲಕನನ್ನು ಜೀವಂತವಾಗಿ ಬಿಡುವುದಾಗಿ ಗುರುನಾಥ್ ಗೆ ಕರೆ ಮಾಡಿ ಹೇಳಿದ್ದರು.

ಅಲ್ಲದೇ ಪೊಲಿಸರಿಗೆ ಮಾಹಿತಿ ತಿಳಿಸಿದರೆ ಮಗನ ಉಸಿರು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದರೂ ಆದರೂ ಗುರುನಾಥ್ ಕಲಬುರ್ಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹಣ ತರುತ್ತಿರುವುದಾಗಿ ಹೇಳುವಂತೆ ಗುರುನಾಥ್ ಅವರಿಂದಲೇ ದುಷ್ಕರ್ಮಿಗಳಿಗೆ ಕರೆ ಮಾಡಿಸಿದ್ದರು. ದುಷ್ಕರ್ಮಿಗಳು ಇರುವ ಸ್ಥಳಕ್ಕೆ ಪೊಲೀಸರು ಹೋಗುತ್ತಿದ್ದಂತೆ ಬಾಲಕನನ್ನು ಸ್ಥಳದಲ್ಲೇ ಬಿಟ್ಟು ಪರಾರುಯಾಗಿದ್ದರು.

Home add -Advt

10 ವರ್ಷದ ಬಾಲಕನನ್ನು ರಕ್ಷಿಸಿದ್ದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ದೋಬಿ ಘಾಟ್ ಗಳಲ್ಲಿ ಆಧುನಿಕ ಯಂತ್ರೋಪಕರಣ: ಬೊಮ್ಮಾಯಿ

https://pragati.taskdun.com/special-grants-for-dobhighats-in-next-budjet-said-cm-bommayi/

Related Articles

Back to top button