ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಂಸತ್ ಮುಂಗಾರು ಅಧಿವೇಶನದ ವೇಳೆ ಅಶಿಸ್ತು ತೋರಿದ ಪ್ರತಿಪಕ್ಷದ 12 ಸಂಸದರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಆಗಸ್ಟ್ ನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಅಶಿಸ್ತು ತೋರಿದ್ದ ಕಾಂಗ್ರೆಸ್ ನ 6, ಟಿಎಂಸಿ ಹಾಗೂ ಶಿವಸೇನೆಯ ತಲಾ ಇಬ್ಬರು ಹಾಗೂ ಸಿಪಿಐ ಮತ್ತು ಸಿಪಿಎಂ ನಿಂದ ತಲಾ ಒಬ್ಬರು ಸಂಸದರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು ಒಟ್ಟು 12 ಸಂಸದರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನಿರ್ಣಯ ಮಂಡಿಸಿದ್ದಾರೆ.
ಫೂಲೋ ದೇವಿ ನೇತಮ್, ಛಾಯಾ ವರ್ಮಾ, ರಿಪುನ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್ ಮತ್ತು ಕಾಂಗ್ರೆಸ್‌ನ ಅಖಿಲೇಶ್ ಪ್ರಸಾದ್ ಸಿಂಗ್, ದೋಲಾ ಸೇನ್, ತೃಣಮೂಲ ಕಾಂಗ್ರೆಸ್‌ನ ಶಾಂತಾ ಛೆಟ್ರಿ, ಪ್ರಿಯಾಂಕಾ ಚತುರ್ವೇದಿ, ಶಿವಸೇನೆಯ ಅನಿಲ್ ದೇಸಾಯಿ,ಸಿಪಿಎಂನ ಎಳಮರಮ್ ಕರೀಂ, ಮತ್ತು ಸಿಪಿಐನ ಬಿನೋಯ್ ವಿಶ್ವಂ ಅಮಾನುತುಗೊಂಡ ಸಂಸದರಾಗಿದ್ದು, ಪ್ರಸ್ತುತ ಚಳಿಗಾಲ ಅಧಿವೇಶನದ ಉಳಿದ ಅವಧಿವರೆಗೆ ಈ ಸಂಸದರು ಅಮಾನತುಗೊಂಡಿದ್ದಾರೆ.
ಬಿಟ್ ಕಾಯಿನ್ ಗೆ ಕಾನೂನುಬದ್ಧ ಮಾನ್ಯತೆ ಇಲ್ಲ ಎಂದ ವಿತ್ತ ಸಚಿವೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ