*ಶೆಡ್ ನಲ್ಲಿ ಜೂಜಾಟ ಆಡುತ್ತಿದ್ದ 12 ಜನರ ಬಂಧನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ಟೋಬರ್ 15 ರಂದು ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮುತ್ನಾಳ ಗ್ರಾಮದಿಂದ ಹಿರೇಬಾಗೇವಾಡಿ ಟೋಲ್ ಕಡೆಗೆ ಹೋಗುವ ಸರ್ವಿಸ್ ರಸ್ತೆ ಹತ್ತಿರದ ಶೆಡ್‌ನಲ್ಲಿ ಜೂಜಾಟದ ಆಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು, ಲಕ್ಷ್ಯಾಂತರ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಶೆಡ್ ನಲ್ಲಿ ಜೂಜಾಟ ಆಡುತ್ತಿದ್ದ 12 ಜನರನ್ನು ಬಂದಿಸಿರು ಹೀರೆಬಾಗೆವಾಡಿ ಪೊಲೀಸರು, ರೂ.4,81,000 ನಗದ ಜಪ್ತಿ ಮಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಹಬಾದ ಖಾದಿರಸಾಬ, ರಿಯಾಜ ಹುಸೇನಸಾಬ ಪಟೇಲ, ಸ್ವಪ್ನಶ ತವನಪ್ಪ, ಈರಪ್ಪ ಬಸಪ್ಪ ಮದನಳ್ಳಿ ,ಪ್ರಕಾಶ ರಾಯಪ್ಪ ನಾಯ್ಕರ, ಯಲ್ಲಪ್ಪ ಬಾಳಪ್ಪ ಅರೆನ್ನವರ, ಈರಪ್ಪ ಯಲ್ಲಪ್ಪ ನಾಯ್ಕರ, ಲಿಂಗನಗೌಡ ಶಿವನಗೌಡ ಪಾಟೀಲ, ಮಲಿಕಜಾನ ರಸೂಲಸಾಬ ಉಸ್ತಾದ, ಚೇತನ ಮಾರುತಿ ಚಂದಗಡಕರ, ಯಲ್ಲಪ್ಪ ಹಣಮಂತ ಜಟ್ಟೆನ್ನವರ ಹಾಗೂ ಮಲ್ಲಿಕಾರ್ಜು ಚನ್ನಮಲ್ಲಪ್ಪ ಹೋಟಿ ಬಂದಿತ ಆರೋಪಿಗಳು.
ಪಿಐ ಸಿಸಿಬಿ ನಂದಿಶ್ವರ ಕುಂಬಾರ ನೇತೃತ್ವದಲ್ಲಿ ಸಿಬ್ಬಂದಿ ಜನರಾದ ಸಿಎಚ್‌ಸಿ ಜಿ. ಆರ್. ಶಿರಸಂಗಿ, ಎಸ್.ಬಿ ಪಾಟೀಲ, ಎಮ್. ಎಮ್. ವಡೇಯರ್ ಮತ್ತು ಸಿಪಿಸಿ ಎ.ಎನ್ ರಾಮಗೊನಟ್ಟಿ, ಮತ್ತು ಎಮ್. ಎಸ್. ಪಾಟೀಲ ರವರು ಕೂಡಿ ದಾಳಿಯಲ್ಲಿ ಭಾಗಿ ಆಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ