
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಡಾ. ಶಿವಬಸವ ಮಹಾಸ್ವಾಮಿಗಳವರ ೧೩೦ ನೇಯ ಜಯಂತಿಯನ್ನು ಆಚರಿಸಲಾಯಿತು.
ಶ್ರೀ ರುದ್ರಾಕ್ಷಿಮಠದ ಪೂಜ್ಯಶ್ರೀ ಲಿಂ. ಡಾ. ಶಿವಬಸವ ಮಹಾಸ್ವಾಮಿಜಿಯವರ ೧೩೦ನೆಯ ಜಯಂತಿ ಮಹೋತ್ಸವದ ಅಂಗವಾಗಿ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ನಾಗನೂರು ಶ್ರೀ ರುದ್ರಾಕ್ಷಿಮಠ ಹಾಗೂ ಪೂಜ್ಯಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿಮಠ, ಬೆಳಗಾವಿ , ಮಡಿವಾಲ ಶ್ರೀ ರಾಜಯೋಗೀಂದ್ರ ಸ್ವಾಮಿಗಳು ಶ್ರೀ ಗುರುಬಸವಲಿಂಗ ಸ್ವಾಮಿಗಳು, ಲಿಂಗೈಕ್ಯ ಡಾ:ಶಿವಬಸವ ಸ್ವಾಮಿಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪೂಜ್ಯರನ್ನು ಗೌರವಿಸಲಾಯಿತು. ಸ್ವರ ನಮನವನ್ನು ಅಕ್ಕನ ಬಳಗ, ಹನುಮನ ಬೀದಿ, ಬೆಳಗಾವಿ, ಶ್ರೀ ಪ್ರಭುದೇವ ಪ್ರತಿಷ್ಠಾನ, ಮಾತೃಮಂಡಳಿ, ಪಂ.ಸೋಮಶೇಖರ ಮರಡಿಮಠ, ಧಾರವಾಡ, ಉಮಾದೇವಿ ರಾಜಶೇಖರ ನಿಜಗುಲಿ, ಮನೋರಮಾ ಹಣ್ಮಟ್ಟೇಕರ, ಪ್ರಸ್ತುತ ಪಡಿಸಿದರು.