Latest

ಮೇ 1ರಿಂದ ಕೋವಿಡ್ ಲಸಿಕೆ ದರ ಹೆಚ್ಚಳ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಲಸಿಕೆ ನೀಡುವ ಪ್ರಮಾಣವೂ ಹೆಚ್ಚಾಗುತ್ತಿದೆ. ಈ ನಡುವೆ ಮುಂದಿನ ತಿಂಗಳಿಂದ ಕೋವಿಡ್ ಲಸಿಕೆ ದರ ದುಪ್ಪಟ್ಟಾಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

250 ರೂಪಾರಿಗೆ ಸಿಗುತ್ತಿದ್ದ ಕೋವಿಡ್ ಲಸಿಕೆ ದರ ಮೇ 1ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಾಗುತ್ತಿದೆ. ಕಾರಣ ಖಾಸಗಿ ಆಸ್ಪತ್ರೆಗಳು ಲಸಿಕೆ ಉತ್ಪಾದನಾ ಕೇಂದ್ರದಿಂದ ನೇರವಾಗಿ ಲಸಿಕೆ ಖರೀದಿ ಮಾಡುತ್ತಿವೆ. ಹೀಗಾಗಿ 1 ಡೋಸ್ ಲಸಿಕೆ 500 ರೂ ನಿಮ್ದ 1000 ರೂ ವರೆಗೂ ಮಾರಾಟವಾಗುವ ಸಾಧ್ಯತೆ ಇದ್ದು, ದುಪ್ಪಟ್ಟು ದರ ನಿಗದಿಗೆ ಖಾಸಗಿ ಆಸ್ಪತ್ರೆಗಳು ಅನುಮತಿ ಕೋರಿವೆ.

ಮುಂದಿನದಿನಗಳಲ್ಲಿ ಕೋವಿಡ್ ಲಸಿಕೆ ದರ ಹೆಚ್ಚಳ ಸಾಧ್ಯತೆ ಬಗ್ಗೆ ಈ ಹಿಂದೆಯೇ ಸೀರಮ್ ಇನ್ಸ್ ಟಿಟ್ಯೂಟ್ ಹಾಗೂ ಭಾರತ್ ಬಯೋಟೆಕ್ ಕಂಪನಿಗಳು ಸುಳಿವು ನೀಡಿದ್ದವು.
ಒಂದೇ ಗ್ರಾಮದ 146 ಜನರಿಗೆ ಕೊರೊನಾ ಪಾಸಿಟಿವ್

Home add -Advt

Related Articles

Back to top button