ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಗ್ರಾಹಕರಿಗೆ ಕೇಬಲ್ ಬಿಲ್ ಅನ್ನು ಇಳಿಸಲು ಅನುಕೂಲವಾಗುವಂತೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ದರಗಳ ಪಟ್ಟಿ ಪ್ರಕಟಿಸಿದೆ. ಫೆ.1ರಿಂದ ನೂತನ ದರ ಜಾರಿಯಾಗುತ್ತಿದ್ದು, ಕೇವಲ 153 ರೂ. ಗೆ ನಿಮಗೆ ಬೇಕಾದ 100 ಚಾನೆಲ್ ವೀಕ್ಷಿಸಬಹುದು.
ಉಚಿತ ಚಾನೆಲ್ ಮಾತ್ರವಲ್ಲ ಯಾವುದೇ 100 ಚಾನೆಲ್ ಆಯ್ಕೆ ಮಾಡಿಕೊಂಡರೂ ನೀವು ಕೊಡಬೇಕಾದದ್ದು 130 ರೂ. ಮತ್ು 23 ರೂ. ಜಿಎಸ್ ಟಿ, ಒಟ್ಟೂ 153 ರೂ. ಮಾತ್ರ. 100ಕ್ಕಿಂತ ಹೆಚ್ಚು ಚಾನೆಲ್ ಬೇಕೆಂದರೆ ಮತ್ತೆ 20 ರೂ. ನೀಡಿದರೆ 125 ಚಾನೆಲ್ ವರೆಗೆ ಪಡೆಯಬಹುದು.
ಟ್ರಾಯ್ ವೆಬ್‌ಸೈಟ್ ನಲ್ಲಿ ಎಲ್ಲ ವಿವರ ನೀಡಲಾಗಿದೆ. ಫೆ.1ರಿಂದ ನಿಮಗೆ ಬೇಕಾದ ಟಿ.ವಿ ಚಾನೆಲ್ ಆಯ್ಕೆ ಮಾಡುವ ಸ್ವಾತಂತ್ರ್ಯ ಇದೆ. ಕೇಬಲ್ ಟಿ.ವಿ ಆಪರೇಟರ್‌ಗಳಿಗೆ ಪಾವತಿಸುವ ಬಿಲ್‌ನಲ್ಲಿ ಮೊದಲನೆಯದಾಗಿ, ಕೇಬಲ್ ಟಿ.ವಿಯ ನೆಟ್‌ವರ್ಕ್ ಕೆಪಾಸಿಟಿ ಫೀ ಅಥವಾ ಮೂಲ ಪ್ಯಾಕೇಜ್‌ನ ದರ ಮಾಸಿಕ 130 ರೂ. ಗಳಲ್ಲಿ 100 ಟಿ.ವಿ ಚಾನೆಲ್ ಲಭ್ಯ. ಇದರ ಮೇಲೆ ಜಿಎಸ್‌ಟಿ ಸೇರಿದಾಗ 153 ರೂ. ಆಗುತ್ತದೆ. ಈ 100 ಚಾನೆಲ್‌ಗಳಲ್ಲಿ ಉಚಿತ ಅಥವಾ ಪೇ ಚಾನೆಲ್ ಅನ್ನು ನೀವೇ ಆಯ್ಕೆ ಮಾಡಬಹುದು. ಎರಡರ ಮಿಶ್ರಣವಾದರೂ ಒಟ್ಟು ದರ 130 ರೂ. ಒಳಗಿರಬೇಕು.
ಒಂದು ವೇಳೆ 100ಕ್ಕಿಂತ ಹೆಚ್ಚು ಚಾನೆಲ್ ನೋಡಬೇಕು ಎಂದು ಬಯಸಿದರೆ, 20 ರೂ. ನೆಟ್‌ವರ್ಕ್ ಶುಲ್ಕ ಕೊಟ್ಟು 25 ಹೆಚ್ಚು ವರಿ ಚಾನೆಲ್ ಪಡೆಯಬಹುದು. 150 ಚಾನೆಲ್ ನೋಡಬೇಕೆಂದಿದ್ದರೆ ಮತ್ತೆ 20 ರೂ. ಹೆಚ್ಚುವರಿ ಕೊಟ್ಟು ಪಡೆಯಬಹುದು.
ಟಿ.ವಿ ಚಾನೆಲ್‌ಗಳಲ್ಲಿ ದರಗಳ ದೃಷ್ಟಿಯಿಂದ ಉಚಿತ ಹಾಗೂ ಪೇಯ್ಡ್ ಚಾನೆಲ್ ಎಂಬ ಎರಡು ವಿಧ. 534 ಫ್ರೀ ಟಿ ಏರ್ ಚಾನೆಲ್‌ಗಳು ಉಚಿತವಾಗಿವೆ. ಇದರಲ್ಲಿ ಬೇಕಾದ್ದನ್ನು ಆಯ್ಕೆ ಮಾಡಬಹುದು.
ಎರಡನೆಯದಾಗಿ, ಗ್ರಾಹಕರು ಬೇಸಿಕ್ ಪ್ಯಾಕ್‌ನ 100 ಚಾನೆಲ್‌ಗಳ ಪೈಕಿ 5 ಚಾನಲ್‌ಗಳನ್ನು ಕೈ ಬಿಟ್ಟು 10 ರೂ.ಗೆ ಲಭ್ಯವಿರುವ 5 ಪೇ ಚಾನೆಲ್‌ಗಳನ್ನು ಸೇರಿಸಬಹುದು. ಆಗ 140 ಮತ್ತು ಜಿಎಸ್‌ಟಿ ಸೇರಿದರೆ ಒಟ್ಟು 165 ರೂ. ಮಾಸಿಕ ಬಿಲ್ ಪಾವತಿಸಿದರೆ ಸಾಕು.
ಮೂರನೆಯದಾಗಿ,ಗ್ರಾಹಕರು ಬೇಸಿಕ್ ಪ್ಯಾಕ್‌ನಲ್ಲಿರುವ 100 ಚಾನೆಲ್‌ಗಳನ್ನು ಇಟ್ಟುಕೊಂಡು, ಹೆಚ್ಚುವರಿ ಪೇ ಚಾನೆಲ್ ಪಡೆಯಬಹುದು. ಉದಾಹರಣೆಗೆ ಬೇಸಿಕ್ ಪ್ಯಾಕ್‌ಗೆ 130 ರೂ. ಹೆಚ್ಚುವರಿ ನೆಟ್‌ವರ್ಕ್ ಫೀ 20 ರೂ, ಹೆಚ್ಚುವರಿ 20 ಪೇ ಚಾನೆಲ್‌ಗಳ ದರ 50 ರೂ, ಹಾಗೂ ವುಗಳ ಮೇಲೆ ಶೇ.18 ಜಿಎಸ್‌ಟಿ ಸೇರಿದಾಗ ಒಟ್ಟು 236 ರೂ.ಗಳಾಗುತ್ತದೆ.
ಟ್ರಾಯ್ ಜಾರಿಗೊಳಿಸುತ್ತಿರುವ ಹೊಸ ನಿಯಮಾವಳಿಗಳನ್ನು ಕೇಬಲ್ ಟಿ.ವಿ ಆಪರೇಟರ್‌ಗಳು ವಿರೋಧಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ