Latest

ಪುಣೆ ಬಳಿ ಗೋಡೆ ಕುಸಿದು 16 ಜನರ ಸಾವು

ಪ್ರಗತಿವಾಹಿನಿ ಸುದ್ದಿ, ಪುಣೆ: 

Home add -Advt

ಮಹಾರಾಷ್ಟ್ರದ ಪುಣೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ 60 ಅಡಿ ಉದ್ದದ ಕಂಪೌಂಡ್ ವಾಲ್ ಕುಸಿದು 16 ಕಾರ್ಮಿಕರು ಸಾವಿಗೀಡಾಗಿದ್ದಾರೆ.

ಪುಣೆಯ ಹೊರವಲಯದ ಕೊಂಡ್ವಾ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಹೌಸಿಂಗ್ ಸೊಸೈಟಿಯೊಂದರ ಕಂಪೌಂಡ್ ಗೋಡೆ ನೆಲಕ್ಕುರುಳಿದೆ. ಅದರ ಕೆಳಗೆ ಉತ್ತರ ಭಾರತದಿಂದ ವಲಸೆ ಬಂದಿದ್ದ ಕಾರ್ಮಿಕರ ಗುಡಿಸಲುಗಳಿದ್ದವು. 

ಈವರೆಗೆ 16 ಜನ ಮೃತಪಟ್ಟಿರುವುದು ದೃಢಪಟ್ಟಿದ್ದು, ಇನ್ನೂ ಎಷ್ಟು ಜನ ಕೆಳಗೆ ಸಿಲುಕಿರಬಹುದೆನ್ನುವುದು ಖಚಿತವಾಗಿಲ್ಲ. ಕಾರು, ರಿಕ್ಷಾ ಸೇರಿದಂತೆ ಹಲವು ವಾಹನಗಳೂ ಅಡಿಗೆ ಸಿಲುಕಿ ನುಜ್ಜುಗುಜ್ಜಾಗಿವೆ.

 

 

Related Articles

Back to top button