Kannada NewsKarnataka NewsLatest

*ಹಿರಿಯ ಸಾಹಿತಿ, ಕವಿ ವಿಷ್ಣು ನಾಯ್ಕ್ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಹಿರಿಯ ಕವಿ, ಸಾಹಿತಿ, ಪ್ರಕಾಶಕ ಅಂಕೋಲಾ ತಾಲೂಕಿನ ಅಂಬಾರಕೊಡ್ಲದ ವಿಷ್ಣು ನಾಯ್ಕ್ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ವಿಷ್ಣು ನಾಯ್ಕ್ ಅವರನ್ನು ಅಂಕೋಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

‘ಪರಿಮಳದಂಗಳದ ಕವಿ’ ಎಂದೇ ಖ್ಯಾತಿ ಪಡೆದಿದ್ದ ವಿಷ್ಣು ನಾಯ್ಕ್ ನಾಡಿನ ಪ್ರಮುಖ ಪ್ರಗತಿಪರ ಚಿಂತಕರಾಗಿದ್ದರು. ಪತ್ರಕರ್ತರಾಗಿ, ಅಂಕಣಕಾರರಾಗಿ, ಸಂಘಟಕರಾಗಿ, ಸಾಹಿತಿ, ಕವಿಗಳಾಗಿ ಜನಪ್ರಿಯತೆ ಪಡೆದಿದ್ದರು.

Home add -Advt

ಅವರ ಮಾಲೀಕತ್ವದ ರಾಘವೇಂದ್ರ ಪ್ರಕಾಶನದಿಂದ ಹಲವು ಅಮೂಲ್ಯ ಕೃತಿಗಳು ಪ್ರಕಟಗೊಂದಿವೆ. ಸುಮನ, ಆ ರೀತಿ ಈ ರೀತಿ, ಅಂಬಾರಕೊಡಲು, ವಾಸ್ತವ, ಹೊಸಭತ್ತ, ಮುಚ್ಚಿದ ಬಾಗಿಲು, ಮರಿಗುಬ್ಬಿ, ನೋವು ಪ್ರೀತಿಯ ಪ್ರಶ್ನೆ, ಕಣ್ಣೀರ ಕತೆಗಳು, ಅಯ್ನೋರ ಪೂಜೆ, ಒಂದು ಹನಿ ಮತ್ತು ಬೀದಿನಾಟಕಗಳು, ಯುದ್ಧ, ದುಡಿಯುವ ಕೈಗಳ ಹೋರಾಟದ ಕತೆ ಮೊದಲಾದವು ವಿಷ್ಣು ನಾಯ್ಕ್ ಅವರ ಪ್ರಮುಖ ಕೃತಿಗಳು.

ವಿಷ್ಣು ನಾಯ್ಕ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯದ ಆದರ್ಶ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಗ್ರಂಥ ಪ್ರಕಾಶನ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ.

Related Articles

Back to top button