ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಏ.17ರಂದು ಬೆಳಗಾವಿಗೆ ಬರಲಿದ್ದಾರೆ.
ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಅವರು ಆಗಮಿಸುತ್ತಿದ್ದು, ಶಹಪುರ ಪೊಲೀಸ್ ಠಾಣೆ ಪಕ್ಕದ ಮಾಲಿನಿ ಪರಿಸರದಲ್ಲಿ ಸಮಾವೇಶ ನಡೆಯಲಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಅದೇ ದಿನ ಬಿಜೆಪಿಯಿಂದ ಬೈಕ್ ರ್ಯಾಲಿಯನ್ನು ಸಹ ಆಯೋಜಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ