
ಪ್ರಗತಿವಾಹಿನಿ ಸುದ್ದಿ; ಮುಂಬೈ: ಹೊಸ ವರ್ಷದ ಆರಂಭದಲ್ಲೇ ವಾಣಿಜ್ಯ ಬಳಕೆ ಸಿಲಿಂಡರ್ ಗ್ರಾಹಕರಿಗೆ ಸಂತಸದ ಸುದ್ದಿ ಹೊರಬಿದ್ದಿದೆ. 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ದರ 102 ರೂಪಾಯಿ ಇಳಿಕೆಯಾಗಿದೆ.
ವಾಣಿಜ್ಯ ಬಳಕೆ ಸಿಲಿಂಡರ್ ಬಳಕೆದಾರರಾದ ಹೋಟೆಲ್, ರೆಸ್ಟೋರೆಂಟ್, ಟೀ ಸ್ಟಾಲ್ ಸೇರಿದಂತೆ ಇತರ ಗ್ರಾಹಕರಿಗೆ ಇದರಿಂದ ಕೊಂಚ ನಿರಾಳವಾಗಿದೆ.
ಕೋಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್ ಈಗ 2,072 ರೂಪಾಯಿ, ಮುಂಬೈ ನಲ್ಲಿ 19 ಕೆಜಿ ಸಿಲಿಂಡರ್ 1,948.5 ರೂಪಾಯಿ, ಚೆನ್ನೈ ನಲ್ಲಿ 19 ಕೆಜಿ ಸಿಲಿಂಡರ್ 2,132 ರೂಪಾಯಿ ಆಗಿದೆ.
ಕಳೆದ ತಿಂಗಳಷ್ಟೇ 19 ಕೆಜಿ ಎಲ್ ಪಿ ಜಿ ಸಿಲಿಂಡರ್ ದರ 100 ರೂಪಾಯಿಯಷ್ಟು ಹೆಚ್ಚಿಸಲಾಗಿತ್ತು. ಇದೀಗ ಹೊಸ ವರ್ಷದಂದೇ 102 ರೂಪಾಯಿ ಕಡಿತಗೊಂಡಿದೆ. ಆದರೆ ದೇಶಿಯ ಇತರ ಸಿಲಿಂಡರ್ ದರದಲ್ಲಿ ಯಾವುದೇ ಇಳಿಕೆಯಾಗಿಲ್ಲ.
ಶಿವಕಾಶಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ; ನಾಲ್ವರು ಸಜೀವದಹನ