Latest

ಗ್ರಾಹಕರಿಗೆ ಬಿಗ್ ಶಾಕ್…!

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಗ್ರಾಹಕರಿಗೆ ಕೇಂದ್ರ ಸರ್ಕಾರ ಮತ್ತೆ ಶಾಕ್ ನೀಡಿದೆ. ವಾಣಿಜ್ಯ ಬಳಕೆ ಸಿಲಿಂಡರ್ ದರದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಹಾಗೂ 5 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ದರ ಕೂಡ ಏರಿಕೆಯಾಗಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ದರ 105 ರೂಪಾಯಿ ಹಾಗೂ ಕೋಲ್ಕತ್ತಾದಲ್ಲಿ 108 ರೂಪಾಯಿ ಏರಿಕೆಯಾಗಿದೆ.

Home add -Advt

5 ಕೆಜಿ ಕಮರ್ಷಿಯಲ್ ಎಲ್ ಪಿಜಿ ಸಿಲಿಂಡರ್ ದರ ಕೂಡ 27 ರೂಪಾಯಿ ಏರಿಕೆಯಾಗಿದೆ. ಹೊಸದರಗಳು ಇಂದಿನಿಂದಲೇ ಜಾರಿಗೆ ಬರಲಿವೆ. ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಕಮರ್ಷಿಯಲ್ ಸಿಲಿಂಡರ್ ಬಳಕೆ ದಾರರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದ್ದು, ಹೋಟೆಲ್ ಆಹಾರ, ಪಾನೀಯ ದರದಲ್ಲಿಯೂ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.

ಗೃಹ ಬಳಕೆ ಸಿಲಿಂಡರ್ ದರದಲ್ಲಿ ಏರಿಕೆಯಾಗಿಲ್ಲ.

ರಷ್ಯಾ ಮಾಲೀಕನ ಹಡಗು ಮುಳುಗಿಸಿದ ಉಕ್ರೇನ್ ನಾವಿಕ, 58 ಕೋಟಿ ರೂ ಹಡಗು ನೀರಿನಲ್ಲಿ ಹೋಮ!: ಆತ ನೀಡಿದ ಕಾರಣ ಗೊತ್ತೇ?

Related Articles

Back to top button