
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸಂತಿ ಬಸ್ತವಾಡ ಗ್ರಾಮದ ಯಲ್ಲಪ್ಪ ಚಿನ್ನಿಕುಪ್ಪಿ ಅವರಿಗೆ ಸೇರಿದ 2 ಆಕಳು ಹಾಗೂ 5 ಕುರಿಗಳು ಮೇಯುವ ಸಂದರ್ಭದಲ್ಲಿ ಕ್ರಿಮಿನಾಶಕ ಮಿಶ್ರಿತ ನೀರು ಕುಡಿದ ಪರಿಣಾಮ ಸಾವಿಗೀಡಾಗಿದ್ದು, ಸುದ್ದಿ ತಿಳಿದ ತಕ್ಷಣ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಸ್ಥಳಕ್ಕೆ ಧಾವಿಸಿದ್ದಾರೆ.
ಜಾನುವಾರುಗಳ ಮಾಲಿಕರಿಂದ ಸಂಪೂರ್ಣ ಮಾಹಿತಿ ಪಡೆದ ಮೃಣಾಲ ಹೆಬ್ಬಾಳಕರ್, ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜೊತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ, ನಿಯಮಾನುಸಾರ ಜಾನುವಾರುಗಳ ಮಾಲಿಕರಿಗೆ ನೆರವು ನೀಡುವಂತೆ ಕೋರಿದರು.

ಸ್ಥಳದಿಂದಲೇ ಕ್ಷೇತ್ರದ ಶಾಸಕಿಯೂ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ನೀಡಿದ ಮೃಣಾಲ ಹೆಬ್ಬಾಳಕರ್, ಸಚಿವರು ಸಹ ಸರಕಾರದಿಂದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸುವಂತೆ ಮೃಣಾಲ ಹೆಬ್ಬಾಳಕರ್ ಜನರಲ್ಲಿ ವಿನಂತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ