GIT add 2024-1
Beereshwara 33

*ಬಿಜೆಪಿಗೆ ಸೇರಿದ 2 ಕೋಟಿ ಹಣ ಸೀಜ್ *

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಇಟಿಎ ಮಾಲ್ ಬಳಿ ಚುನಾವಣಾಧಿಕಾರಿಗಳು ತಪಾಸಣೆ ಮಾಡುತ್ತಿದ್ದ ವೇಳೆ ಬಿಜೆಪಿಗೆ ಸೇರಿದ 2ಕೋಟಿ ಹಣ ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ. 

KA 09 MB 2412 ಕಾರಿನಲ್ಲಿ ಸಾಗಿಸಲಾಗುತ್ತಿದ್ದ ಹಣವನ್ನು ನಿನ್ನೆ ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದರು. ಆ ಹಣ ನಮ್ಮದೇ ಎಂದು ಬಿಜೆಪಿ ಹೇಳಿಕೊಂಡಿದೆ.‌ ಬ್ಯಾಂಕ್ ನಿಂದ ಹಣ ವಿತ್ ಡ್ರಾ ಮಾಡಿರೋ ದಾಖಲೆ  ಬಿಡುಗಡೆ ಮಾಡಲಾಗಿದೆ.

ಮಲ್ಲೇಶ್ವರಂ‌ನ ಕೆನರಾ ಬ್ಯಾಂಕ್ ನ ಪಕ್ಷದ ಚಾಲ್ತಿ ಖಾತೆಯಿಂದ. 27-03-2024ರಂದು ವಿತ್ ಡ್ರಾ ಮಾಡಿರೋ ಹಣ ಇದಾಗಿದ್ದು, ಈ ಹಣವನ್ನು ಪಕ್ಷದ ರಾಜ್ಯ ಕಚೇರಿಯಲ್ಲಿ ಇರಿಸಲಾಗಿತ್ತು. ಮೈಸೂರು-ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪಕ್ಷದ ಬೂತ್ ಕಾರ್ಯಕರ್ತರಿಗೆ ಪಕ್ಷದ ಕಾರ್ಯಕ್ರಮಗಳಿಗೆ ಕಳುಹಿಸಲಾಗಿತ್ತು. 2 ಕೋಟಿಯನ್ನು ಮೈಸೂರಿನ ವೆಂಕಟೇಶ್ ಎಂಬುವವರ ಕಾರಿನಲ್ಲಿ ಕಳುಹಿಸಿಲಾಗಿತ್ತು. ಸದ್ಯ ಹಣವನ್ನ ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದು ಸದ್ಯ ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ.

Emergency Service

Laxmi Tai add
Bottom Add3
Bottom Ad 2