Latest

2 ಕೋಟಿ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಆರ್ಕಿಟೆಕ್ಟ್ ಮನೆಯಲ್ಲಿ ಬರೋಬ್ಬರಿ 2 ಕೋಟಿ ರೂಪಾಯಿ ಕಳ್ಳತನ ಪ್ರಕರಣ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸಂದೀಪ್ ಲಾಲ್ ಎಂಬುವವರ ಮನೆಯಲ್ಲಿ 2 ಕೋಟಿ ರೂಪಾಯಿ ಕಳ್ಳತನ ಮಾಡಿದ್ದ ಕಳ್ಳರು ಹಣ ಸಮೇತ ಸಿಕ್ಕಿಬಿದ್ದಿದ್ದರು. ಆದರೆ ಇದೀಗ ಓರ್ವ ಆರ್ಕಿಟೆಕ್ಟ್ ಮನೆಯಲ್ಲಿ 2 ಕೋಟಿ ಹಣ ಹೇಗೆ ಬಂತು ಎಂಬ ಬಗ್ಗೆ ತನಿಖೆ ಆರಂಭವಾಗಿದೆ.

Related Articles

ಅಷ್ಟೊಂದು ಹಣವನ್ನು ಮನೆಯಲ್ಲಿ ಇಟ್ಟಿರಲು ಕಾರಣವೇನು? ಎಂದು ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಸಂದೀಪ್ ಲಾಲ್ ಹೇಳುವ ಪ್ರಕಾರ ಮಧ್ಯಪ್ರದೇಶದಲ್ಲಿದ್ದ ಜಮೀನು ಮಾರಾಟ ಮಾಡಿದ್ದೆವು. ಅಲ್ಲದೇ ಬೆಂಗಳೂರಿನಲ್ಲಿ ಒಂದು ಮನೆಯನ್ನು 10 ಲಕ್ಷಕ್ಕೆ ಲೀಸ್ ಲೀಸ್ ಗೆ ನೀಡಿದ್ದೆವು. ಆ ಹಣ ಮನೆಯಲ್ಲಿತ್ತು ಎಂದಿದ್ದಾರೆ. ಆದರೆ ಪೊಲೀಸರು ಕೇಳಿದ ದಾಖಲೆಗಳನ್ನು ಸಂದೀಪ್ ಇನ್ನೂ ಒದಗಿಸಿಲ್ಲ ಎನ್ನಲಾಗಿದೆ.

ಸದ್ಯ ವಶಕ್ಕೆ ಪಡೆದ ಹಣವನ್ನು ಕೆ ಎಸ್ ಲೇಔಟ್ ಪೊಲೀಸರು ಕೋರ್ಟ್ ಗೆ ಒಪ್ಪಿಸಿದ್ದಾರೆ. ಸಂದೀಪ್ ದಾಖಲೆಗಳನ್ನು ಒದಗಿಸಿ ಕೋರ್ಟ್ ನಿಂದ ಹಣ ಪದೆದುಕೊಳ್ಳಬಹುದು ಅಲ್ಲದೇ ಐಟಿ ಇಲಾಖೆಯಿಂದಲೂ ಕೂಡ ಎನ್ ಒಸಿ ಪಡೆಯಬೇಕು. ದಾಖಲೆ ಒದಗಿಸದಿದ್ದರೆ ಎಲ್ಲಾ ಹಣಗಳು ಸರ್ಕಾರದ ಬೊಕ್ಕಸಕ್ಕೆ ಸೇರಲಿದೆ.

ಹಣ ಕಳ್ಳತನವಾದಾಗ ದೂರು ದಾರ ಸಂದೀಪ್ ತಂದೆ ಮನಮೋಹನ್ ಲಾಲ್ ಎಫ್ ಐ ಆರ್ ನಲ್ಲಿ ಹಣದ ಲೆಕ್ಕ ತೋರಿಸಿಲ್ಲ. ಹಣದ ಬಗ್ಗೆ ಮರೆ ಮಚಿದ್ದ್ದು ಯಾಕೆ ಎಂಬ ವಿಚಾರ ಚರ್ಚೆಗೆ ಕಾರಣವಗಿದೆ.

ಸಂದೀಪ್ ಲಾಲ್ ಮಾರ್ಚ್ 27ರಂದು ಚೆನ್ನೈ ಗೆ ತೆರಳಿದ್ದರು. ಸಂದೀಪ್ ತಂದೆ ಮನಮೋಹನ್ ಬೇರೆ ಮನೆಯಲ್ಲಿ ವಾಸವಿದ್ದರು. ವಾಕ್ ಮುಗಿಸಿ ಮಗನ ಮನೆ ಮುಂದೆ ಬರುವಾಗ ಮನೆ ಬಾಗಿಲು ತೆಗೆದಿತ್ತು. ಹೋಗಿ ನೋಡಿದರೆ ಬಟ್ಟೆಗಳೆಲ್ಲಾ ಚಲ್ಲಾಪಿಲ್ಲಿಯಾಗಿತ್ತಲ್ಲದೇ ಕಬೋರ್ಡ್ ಓಪನ್ ಆಗಿತ್ತು. ಕಳ್ಳತನವಾಗಿರುವ ಬಗ್ಗೆ ಮಗನಿಗೆ ಫೋನ್ ಮಾಡಿ ತಿಳಿಸಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button