ಪ್ರಗತಿವಾಹಿನಿ ಸುದ್ದಿ, ಮುಂಬಯಿ – 2 ತಿಂಗಳ ಮಗುವನ್ನು ಕೈಗೆತ್ತಿಕೊಳ್ಳಲು ಹೆದರಿಕೆಯಾಗುತ್ತದೆ. ಅಂತದರಲ್ಲಿ ಅದು ಕೋರೊನಾ ಸೋಂಕಿಗೆ ತುತ್ತಾಗಿದ್ದು, ಹೃದ್ರೋಗದಿಂದ ಬಳಲುತ್ತಿದ್ದರೆ ಪರಿಸ್ಥಿತಿ ಏನಿರಬಹುದು?
ಜನ್ಮತಃ ಹೃದಯವಿಕಾರ ಮತ್ತು ಜನಿಸಿದ ಒಂದು ತಿಂಗಳಲ್ಲೇ ಕೋವಿಡ್ ಸೋಂಕಿಗೆ ತುತ್ತಾದ 2 ತಿಂಗಳ ಶಿಶು ಈ ಎರಡೂ ರೋಗಗಳ ಮೇಲೆ ಯಶಸ್ವಿಯಾಗಿ ಚಿಕಿತ್ಸೆ ಪಡೆದು ಗುಣಮುಖವಾದ ಘಟನೆ ಕೋಕಿಲಾಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಘಟಿಸಿದೆ.
ಇಂಥಹ ಪರಿಸ್ಥಿತಿಯಲ್ಲಿ ಶಿಶುವಿನ ಕ್ಲಿಷ್ಟಕರವಾದ ಹೃದಯ ಶಸ್ತ್ರಕ್ರಿಯೆಯನ್ನು ಕನ್ನಡಿಗರಾದ ಡಾ. ಸುರೇಶ್ ರಾವ್ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ನಂದೂರ್ ಬಾರ್ ಇಲ್ಲಿಯ ಕೃಷ್ಣ ಅಗರ್ ವಾಲ್ ಇವರ 1ತಿಂಗಳ ಶಿಶುವಿಗೆ ತಾತ್ಕಾಲಿಕವಾಗಿ ಹೃದಯ ಶಸ್ತ್ರಕ್ರಿಯೆ ಮಾಡುವುದು ಅಗತ್ಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಶಿಶುವಿಗೆ ಕೋರೊನಾ ಸೋಂಕು ಇರುವುದು ಕೂಡ ಪತ್ತೆಯಾಗಿದ್ದರಿಂದ ಎರಡು ವಾರದ ನಂತರ ಶಸ್ತ್ರಕ್ರಿಯೆ ಮಾಡಲಾಯಿತು. ಮಗು ಕೋರೊನಾ ದಿಂದ ಪೂರ್ತಿ ಗುಣಮುಖವಾಗುವವರೆಗೆ ಹೃದಯದ ಸ್ಥಿರತೆಯ ಮೇಲೆ ಲಕ್ಷ್ಯವಿಡಲಾಗಿತ್ತು. ಎರಡು ವಾರದ ನಂತರ, ಕೋರೊನಾದಿಂದ ಗುಣಮುಖವಾದ ನಂತರ ಅತ್ಯಂತ ಕ್ಲಿಷ್ಟಕರವಾದ ಓಪನ್ ಹಾರ್ಟ್ ಕರೆಕ್ಟಿವ್ ಕಾರ್ಡಿಯಾಕ್ ಸರ್ಜರಿಯನ್ನು ಯಶಸ್ವಿಯಾಗಿ ಡಾಕ್ಟರ್ ಸುರೇಶ್ ರಾವ್ ಅವರ ನೇತೃತ್ವದಲ್ಲಿ ಮಾಡಲಾಯಿತು. ಶಸ್ತ್ರಕ್ರಿಯೆ ನಂತರ ಮಗುವಿನ ಆರೋಗ್ಯದಲ್ಲಿ ವೇಗದಿಂದ ಸುಧಾರಣೆ ಕಂಡು ಬಂತಲ್ಲದೇ ಗುಣಮುಖವಾದ ಶಿಶುವನ್ನು ಮನೆಗೆ ಕಳಿಸಲಾಗಿದೆ.
ಇಷ್ಟೆಲ್ಲ ನೆಗೆಟಿವ್ ಘಟನೆಗಳು ಘಟಿಸುತ್ತಿರುವಾಗ ಇದೊಂದು ನನ್ನ ಪಾಲಿಗೆ ಪಾಸಿಟಿವ್ ವಾರ್ತೆ ಎನ್ನಬಹುದಾಗಿದೆ ಎಂದು ಡಾಕ್ಟರ್ ಸುರೇಶ್ ರಾವ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಜನಕಲ್ಯಾಣ ಟ್ರಸ್ಟ್ ಹೆಸರಿನಲ್ಲಿ ಕೋವಿಡ್ ಸೆಂಟರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ