ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನೇಗಿನಹಾಳದ ಬಸವಸಿದ್ಧಲಿಂಗ ಸ್ವಾಮೀಜಿ ನೇಣಿಗೆ ಶರಣಾಗಲು ಕಾರಣವೇನು ಎನ್ನುವ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ.
ಸ್ವಾಮೀಜಿಗಳು ಬರೆದಿರುವ ಡೆತ್ ನೋಟ್ ಪತ್ತೆಯಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ 2 ವಿಷಯಗಳು ಅವರನ್ನು ತೀವ್ರ ಘಾಸಿಗೊಳಿಸಿದ್ದವು.
ಮೊದಲನೆಯದಾಗಿ ಇಬ್ಬರು ಮಹಿಳೆಯರು ಮಾತನಾಡಿದ ಆಡಿಯೋ ಕೆಲವು ದಿನಗಳ ಹಿಂದೆ ಬಹಿರಂಗವಾಗಿತ್ತು. ಅದರಲ್ಲಿ ನೇಗಿನಾಳ ಮಠದ ಸ್ವಾಮೀಗಳೂ ಹಾಗೇ ಎಂದು ಮಾತನಾಡಿಕೊಂಡಿದ್ದರು.
ಚಿತ್ರದುರ್ಗದ ಸ್ವಾಮಿಗಳ ಲೈಂಗಿಕ ಹಗರಣ ಉಲ್ಲೇಖಿಸಿ, ನೇಗಿನಾಳ ಮಠದ ಸ್ವಾಮಿಗಳ ವಿಷಯವನ್ನೂ ಮಹಿಳೆ ಉಲ್ಲೇಖಿಸಿದ್ದಳು. ಈ ಆಡಿಯೋ ತೀವ್ರ ವೈರಲ್ ಆಗಿತ್ತು.
ಈ ಆಡಿಯೋದಿಂದಾಗಿ ನನಗೆ ಜೀವವೇ ಬೇಡ ಎನಿಸುತ್ತಿದೆ ಎಂದು ಭಕ್ತರಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಭಾನುವಾರ ಸಂಜೆ ಭಕ್ತರ ಜೊತೆ ಮಾತನಾಡುವಾಗ ತೀರಾ ನೊಂದುಕೊಂಡಿದ್ದರು ಎನ್ನಲಾಗಿದೆ.
ಇದೀಗ ಆಡೀಯೋ ವೈರಲ್ ಮಾಡಿದವರಿಗೂ ನಡುಕ ಶುರುವಾಗಿದೆ.
ಈ ಆಡಿಯೋ ಕುರಿತು ತನಿಖೆ ನಡೆಸಬೇಕು ಎಂದು ಭಕ್ತರಿಬ್ಬರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಆಡಿಯೋದಲ್ಲಿ ಮಾತನಾಡಿರುವ ಮನಗುಂಡಿ ಗ್ರಾಮದ ಸತ್ಯಕ್ಕ ಹಾಗೂ ಗಂಗಾವತಿಯ ರುದ್ರಮ್ಮ ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ವಾಮೀಜಿ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟಿದ್ದಾರೆ.
ಇದರ ಜೊತೆಗೆ, ಚಿತ್ರದುರ್ಗದ ಮುುರುಘಾ ಶರಣರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಸಿದ್ದಲಿಂಗ ಸ್ವಾಮೀಜಿಗಳನ್ನು ವಿಚಾರಣೆಗೆ ಕರೆಯಲಾಗಿತ್ತು ಎನ್ನಲಾಗುತ್ತಿದೆ. ವಿಚಾರಣೆಗೆ ನೋಟೀಸ್ ಬಂದ ಹಿನ್ನೆಲೆಯಲ್ಲಿ ಸಹ ಸ್ವಾಮಿಗಳು ನೊಂದುಕೊಂಡಿದ್ದರು ಎನ್ನಲಾಗಿದೆ.
ನಿಜವಾದ ಕಾರಣ ವಿಚಾರಣೆಯಲ್ಲಷ್ಟೆ ತಿಳಿಯಬೇಕಿದೆ.
ಕಳೆದ 2007 ರಲ್ಲಿ ಮಡಿವಾಳೇಶ್ವರ ಪೀಠ ಅಲಂಕರಿಸಿದ್ದ ಬಸವಸಿದ್ಧಲಿಂಗ ಸ್ವಾಮೀಜಿ, 15 ವರ್ಷಗಳಿಂದ ಮಡಿವಾಳೇಶ್ವರ ಪೀಠಾದಿಪತಿ ಆಗಿದ್ದರು. ನಿನ್ನೆ ತಡರಾತ್ರಿವರೆಗೂ ಭಕ್ತರ ಜೊತೆಗೆ ಮಾತುಕತೆ ನಡೆಸಿದ್ದರು.
ಸೇವಕರು ಬೆಳಗ್ಗೆ ಸ್ವಾಮೀಜಿ ಕೋಣೆಗೆ ಹೋದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ನೆಗಿನಹಾಳ ಗ್ರಾಮದಲ್ಲೀಗ ಸ್ಮಶಾನ ಮೌನ ಆವರಿಸಿದೆ.
https://pragati.taskdun.com/crime-news/suicide-by-writing-bjp-leaders-name/
https://pragati.taskdun.com/latest/neginala-basava-siddalinga-swamiji-committed-suicide/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ