Kannada NewsKarnataka NewsLatest

*ಮನೆ ಮುಂದೆ ಆಟವಾಡುತ್ತಾ ನಾಲೆಗೆ ಬಿದ್ದ ಕಂದಮ್ಮ: 2 ವರ್ಷದ ಮಗು ಸಾವು*

ಪ್ರಗತಿವಾಹಿನಿ ಸುದ್ದಿ: ಮಕ್ಕಳು ಆಟವಾಡುತ್ತಿದ್ದಾರೆ ಎಂದು ಪೋಷಕರು ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಪುಟ್ಟ ಮಕ್ಕಳು ಎಂತಹ ಅನಾಹುತಗಳನ್ನು ಮಾಡಿಕೊಂಡುಬಿಡುತ್ತಾರೆ ಎಂಬುದಕ್ಕೆ ಈ ದುರಂತ ಸಾಕ್ಷಿ. ಮನೆಯ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಕಂದಮ್ಮ ನಾಲೆಗೆ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಾಲಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ತೌಸಿಫ್ ಹಗೂ ಅರ್ಜು ದಂಪತಿಯ 2 ವರ್ಷದ ಮಗಳು ಆಟವಾಡಲು ಮನೆಯಿಂದ ಹೊರ ಬಂದಿದ್ದಾಳೆ. ಮಗುವೊಂದೇ ಆಟವಾಡುತ್ತಾ ಮನೆಯ ಹೊರಬಂದರೂ ಪೋಷಕರು ಗಮನಿಸಿಲ್ಲ. ಆಟವಾಡುತ್ತಾ ನಾಲೆಯಬಳಿ ಹೋದ ಮಗು ಆಕಸ್ಮಿಕವಾಗಿ ನಾಲೆಗೆ ಬಿದ್ದಿದ್ದಾಳೆ.

Home add -Advt

ತಕ್ಷಣ ಸ್ಥಳೀಯರು ಇದನ್ನು ಕಂಡು ಮಗುವನ್ನು ರಕ್ಷಿಸಲು ಯತ್ನಿಸಿ ಮೇಲಕೆತ್ತಿದ್ದಾರೆ. ಆಸ್ಪತ್ರೆಗೆ ಮಗುವನ್ನು ಕರೆದೊಯ್ಯುವಷ್ಟರಲ್ಲಿ ಮಗು ಕೊನೆಯುಸಿರೆಳೆದಿದೆ. ಪೋಷಕರ ನಿರ್ಲಕ್ಷಕ್ಕೆ ಮುದ್ದುಕಂದಮ್ಮ ಬಲಿಯಾಗಿದೆ.

Related Articles

Back to top button