Wanted Tailor2
Cancer Hospital 2
Bottom Add. 3

*2 ವರ್ಷದ ಮಗುವನ್ನು ಕಿಡ್ನ್ಯಾಪ್ ಮಾಡಿ ಹೊತ್ತೊಯ್ದ ಕಳ್ಳ….ಮುಂದೇನಾಯ್ತು?*

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: 2 ವರ್ಷದ ಮಗುವನ್ನು ಚಿಕ್ಕಬಳ್ಳಾಪುರದಲ್ಲಿ ಕಿಡ್ನ್ಯಾಪ್ ಮಾಡಿದ್ದ ದುಷ್ಕರ್ಮಿ ಹುಬ್ಬಳ್ಳಿಯಲ್ಲಿ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಅಜ್ಜಿ, ಅಜ್ಜ ಹಾಗೂ ತಾಯಿ ಜೊತೆ ದರ್ಗಾಕ್ಕೆ ಬಂದಿದ್ದ 2 ವರ್ಷದ ಜಾವೀದ್ ಎಂಬ ಮಗುವನ್ನು ದುಷ್ಕರ್ಮಿಯೊಬ್ಬ ಪರಿಚಿತನಂತೆ ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಾಧ್ಯಮಗಳಲ್ಲಿಯೂ ಈ ಬಗ್ಗೆ ಸುದ್ದಿ ಪ್ರಸಾರವಾಗಿತ್ತು. ನವೆಂಬರ್ 5 ರಂದು ಈ ಘಟನೆ ನಡೆದಿತ್ತು.

ಬೆಂಗಳೂರು ಮೂಲದ ಜಬೀವುಲ್ಲಾ, ಸುಮಯ್ಯಾ ದಂಪತಿಯ ಮಗು ಜಾವೀದ್, ಅಜ್ಜ-ಅಜ್ಜಿ ಹಾಗೂ ತಾಯಿ ಜೊತೆ ದರ್ಗಾದ ಒಳಗೆ ಹೋಗುತ್ತಿದ್ದಾಗ ಜನದಟ್ಟಣೆಯಾದ ಸಂದರ್ಭದಲ್ಲಿ ಸಮಯ ನೋಡಿಕೊಂಡು ಕಳ್ಳ ಮಗುವನ್ನು ಹೊತ್ತೊಯ್ದಿದ್ದಾನೆ. ಮಗು ನಾಪತ್ತೆಯಾಗುತ್ತಿದ್ದಂತೆ ದಂಪತಿ ಕಣ್ಣೀರಿಟಿದ್ದರು. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮಗು ಅಪಹರಣದ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅಪಹರಣಕಾರ ಹುಬ್ಬಳ್ಳಿಯ ಬಾಲಮಂದಿರದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಅಪಹರಣವಾಗಿದ್ದ ಮಗು ಇಂದು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು, ಸುರಕ್ಷಿತವಾಗಿ ಮಗು ತಂದೆ-ತಾಯಿಗಳ ಮಡಿಲು ಸೇರಿದೆ.


Bottom Add3
Bottom Ad 2

You cannot copy content of this page