Kannada NewsKarnataka News

20 ರೂ. ಆಸೆಗಾಗಿ ಕಂದಮನನ್ನು ಕೊಲೆ ಮಾಡಿದ ಯುವತಿ

ಪ್ರಗತಿವಾಹಿನಿ ಸುದ್ದಿ,  ಕಬ್ಬೂರ – ಸಮೀಪದ ಜಾಗನೂರ ಹೊರವಲದ ತೋಟದಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ೨೦ರೂ ಆಸೆಗಾಗಿ  ಬಾವಿಗೆ ನೂಕಿ ಕೊಲೆ ಮಾಡಿದ ಘಟನೆ ನಡೆದಿದೆ.

ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ರಾಮಪ್ಪಾ ಕಳ್ಳೆಪ್ಪಾ ಖಾನಾಪೂರೆ ಎಂಬುವರ ಟ್ರ್ಯಾಕ್ಟರಿನ ಮೇಲೆ ಮಹಾರಾಷ್ಟ ರಾಜ್ಯದ ವಾಸಿಮ ಜಿಲ್ಲೆಯ ಗ್ಯಾಂಗಿನವರು ಕಬ್ಬು ಕಟಾವ್ ಮಾಡುವ ಸಲುವಾಗಿ ಕಳೆದ ಏಳು ತಿಂಗಳ ಹಿಂದೆ ಗ್ರಾಮಕ್ಕೆ ಬಂದು ಕಬ್ಬು ಕಟಾವ ಮಾಡಿ ತಮ್ಮ ಊರಿಗೆ ಹೂಗುವುದರೊಳಗಾಗಿ ಈ ಮಹಾಮಾರಿ ಕೊರೋನಾ ಬಂದು ಲಾಕಡೌನ್ ಆದ ಕಾರಣ ಇಲ್ಲೆ ಉಳಿದಕೊಂಡ್ಡಿದ್ದರು.

ಅದೇ ಗ್ಯಾಂಗಿನಲ್ಲಿ ಕೆಲಸ ಮಾಡುವ ಪೂಜಾ ದತ್ತರಾವ್ ಕಾಂಬಳೆ (೨೫) ಎಂಬ ಮಹಿಳೆಯು ೨೦ರೂ ಆಸೆಗಾಗಿ ದಿವ್ಯಾ ವಿನೋದ ಉಗಡೆ ಎನ್ನುವ ೪ ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಘಟನೆ ನಡೆದಿದೆ.

ಬಾಲಕಿಯನ್ನು ಆಕೆಯ ತಾಯಿ 20 ರೂ. ಕೊಟ್ಟು ಅಂಗಡಿಯಿಂದ ಸಾಮಾನು ತರಲು ಕಳಿಸಿದ್ದಳು. ಬಾಲಕಿಯ ಕೈಯಲ್ಲಿ 20 ರೂ ಇರುವುದನ್ನು ನೋಡಿದ ಯುವತಿ ಆಕೆಯ ಕೈಯಿಂದ ಹಣ ಕಸಿದುಕೊಂಡು ಬಾಲಕಿಯನ್ನು ಬಾವಿಗೆ ಎಸೆದಿದ್ದಾಳೆ.

Home add -Advt

ಈ ಪ್ರಕರಣವನ್ನು ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ಆರ್.ಆರ್.ಪಾಟೀಲ ಮತ್ತು ಪಿಎಸ್‌ಐ ರಾಕೇಶ ಬಗಲಿ ಹಾಗೂ ಸಿಬ್ಬಂದಿಗಳು ಸ್ಥಳ ಪರಿಸಿಲಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Related Articles

Back to top button