ಚಿಕ್ಕೋಡಿ ಲೋಕಸಭಾ ಕಣದಲ್ಲಿ 20 ಅಭ್ಯರ್ಥಿಗಳು
ಪ್ರಗತಿವಾಹಿನಿ ಸುದ್ದಿ ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಚುನಾವಣಾ ವೀಕ್ಷಕರಾದ ಜಿ.ಎಸ್.ಪಾಂಡಾ ದಾಸ್ ಅವರ ಸಮ್ಮುಖದಲ್ಲಿ ಶನಿವಾರ (ಎ.20) ರಂದು ನಾಪತ್ರಗಳ ಪರಿಶೀಲನೆ ಆಗಿದೆ. ಏಪ್ರೀಲ್ 22 ರಂದು ಮಧ್ಯಾಹ್ನ 3 ಗಂಟೆಯ ವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ.
ಭಾರತೀಯ ಜನತಾ ಪಾರ್ಟಿಯಿಂದ ಅಣ್ಣಸಾಹೇಬ ಎಸ್. ಜೊಲ್ಲೆ, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ, ಸರ್ವ ಜನತಾ ಪಾರ್ಟಿ ಪಕ್ಷದಿಂದ ಅಪ್ಪಾಸಾಹೇಬ ಕುರಣೆ, ಕರ್ನಾಟಕ ರಾಷ್ಟ ಸಮಿತಿ ಪಕ್ಷದಿಂದ ಕುಮಾರ ಡೊಂಗರೆ, ಬಹುಜನ ಭಾರತ ಪಾರ್ಟಿಯಿಂದ ಪವನಕುಮಾರ ಬಾಬುರಾವ ಮಾಳಗೆ, ಭಾರತೀಯ ಜವಾನ ಕಿಸಾನ ಪಾರ್ಟಿಯಿಂದ ಸತ್ಯಪ್ಪ ದಶರಥ ಕಾಳೇಲಿ, ಪಕ್ಷೇತರ ಅಭ್ಯರ್ಥಿಗಳಾದ ಕಾಡಯ್ಯ ಶಂಕರಯ್ಯ ಹಿರೇಮಠ, ಕಾಶಿನಾಥ ಕುರಣಿ, ಗಜಾನನ ಪೂಜಾರಿ, ಜಿತೇಂದ್ರ ಸುಭಾಷ ನೇರ್ಲೆ, ಭೀಮಸೇನ ಸನದಿ, ಮಗದುಮ ಇಸ್ಮಾಯಿಲ್ ಮಗದುಮ, ಮಹೇಶ ಅಶೋಕ, ಮೋಹನ ಮೊಟನ್ನವರ, ಯಾಸೀನ ಸಿರಾಜುದ್ಧಿನ ಪಟಕಿ, ರಾಜು ವಿಜಯ ಸೊಲ್ಲಾಪುರೆ, ವಿಲಾಸ ಮಣ್ಣೂರ, ಶಂಭು ಕಲ್ಲೋಳಿಕರ, ಶ್ರೀಣಿಕ ಅಣ್ಣಾಸಾಹೇಬ ಜಂಗಟೆ, ಸಮ್ಮೇದ ಸರದಾರ ವರ್ಧಮಾನೆ ಅವರುಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.
ನಾಮಪತ್ರ ಪರೀಶಿಲನೆ ವೇಳೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ, ಸಹಾಯಕ ಚುನಾವಣಾಧಿಕಾರಿ ಬಸವರಾಜ ಅಡವಿಮಠ ಹಾಗೂ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ