*ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ನ 20 ಬೋಗಿಗಳು*
ಪ್ರಗತಿವಾಹಿನಿ ಸುದ್ದಿ: ಸಬರಮತಿ ಎಕ್ಸ್‌ಪ್ರೆಸ್ 20 ಬೋಗಿಗಳು ಇಂದು ಮುಂಜಾನೆ ಹಳಿತಪ್ಪಿದ್ದು, ಸುಮಾರು 2.35 ರ ಹೊತ್ತಿಗೆ ಉತ್ತರ ಪ್ರದೇಶದ ಕಾನ್ಸುರ ಮತ್ತು ಭೀಮಸೇನ್ ನಿಲ್ದಾಣದ ನಡುವೆ ಈ ಘಟನೆ ಸಂಭವಿಸಿದೆ.
ಈ ಘಟನೆಯಲ್ಲಿ ಯಾವ ಸಾವು-ನೂವು ಕೂಡ ಸಂಭವಿಸಿಲ್ಲ. ಸಬರಮತಿ ಎಕ್ಸ್‌ಪ್ರೆಸ್‌ನ ಇಂಜಿನ್ ಇಂದು ಬೆಳಗಿನ ಜಾವ 2.35ಕ್ಕೆ ಕಾನ್ಸುರ ಬಳಿ ಟ್ರ್ಯಾಕ್‌ನಲ್ಲಿ ಇರಿಸಲಾಗಿದ್ದ ವಸ್ತುವೊಂದಕ್ಕೆ ಡಿಕ್ಕಿ ಹೊಡೆದು ಹಳಿತಪ್ಪಿದೆ. ಇಂಜಿನ್‌ಗೆ ತೀವ್ರ ಹೊಡೆತ ಬಿದ್ದಿರುವ ಗುರುತುಗಳು ಕಂಡುಬಂದಿದ್ದು, ಸಾಕ್ಷ್ಯವನ್ನು ಪಡೆಯಲಾಗಿದೆ.
ಯಾವುದೇ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಗಾಯಗಳಾಗಿಲ್ಲ. ಪ್ರಯಾಣಿಕರಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್‌ನಲ್ಲಿ ಮಾಹಿತಿ ತಿಳಿಸಿದ್ದಾರೆ.
ಘಟನೆಯಲ್ಲಿ ಬೋಗಿಗಳಿಗೆ ಹಾನಿ ಉಂಟಾಗಿದೆ. ರೈಲ್ವೇ ಹಳಿಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಭಾರತೀಯ ರೈಲ್ವೆ ಹೇಳಿದೆ. ಹಳಿತಪ್ಪಿದ ಕಾರಣ 7 ರೈಲುಗಳನ್ನು ರದ್ದುಗೊಳಿಸಿ, ಮೂರು ಮಾರ್ಗಗಳನ್ನು ಬದಲಾಯಿಸಲಾಗಿದೆ. ಅಪಘಾತ ಸ್ಥಳದಿಂದ ಕಾನ್ಪುರ ರೈಲು ನಿಲ್ದಾಣಕ್ಕೆ ಪ್ರಯಾಣಿಕರನ್ನು ಸಾಗಿಸಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ