Belagavi NewsBelgaum NewsKannada NewsKarnataka News

*20 ದಿನದ ಕಂದಮ್ಮನನ್ನು ಬಿಟ್ಟು ಹೋದ ತಾಯಿ: ಮಗುವಿನ ಜೈವಿಕ ಪೋಷಕರ ಪತ್ತೆಗಾಗಿ ಮನವಿ*


ಪ್ರಗತಿವಾಹಿನಿ ಸುದ್ದಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ದತ್ತು ಸ್ವೀಕಾರ ಕೇಂದ್ರದ ಮಮತೆಯ ತೊಟ್ಟಿಲಿನಲ್ಲಿ ಜೂ.೧ ಬೆಳಗ್ಗೆ ೫.೩೦ ಗಂಟೆಗೆ ಅಂದಾಜು ೨೦ ದಿನದ ಹೆಣ್ಣು ಮಗುವನ್ನು ಬಿಟ್ಟು ಹೋಗಿದ್ದು, ದತ್ತು ಕೇಂದ್ರದ ಸಿಬ್ಬಂದಿಯವರು ಮಗುವನ್ನು ರಕ್ಷಣೆ ಮಾಡಿ ಆರೈಕೆ ಮಾಡುತ್ತಿದ್ದಾರೆ.


ಸದರಿ ಮಗುವಿನ ಜೈವಿಕ ಪೋಷಕರು ಇದ್ದಲ್ಲಿ ಬೆಳಗಾವಿ ಜಿಲ್ಲೆಯ ಸುವರ್ಣ ವಿಧಾನ ಸೌಧದ ಜಿಲ್ಲಾ ಮಕ್ಕಳ ಘಟಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ದೂರವಾಣಿ ೦೮೩೧-೨೪೭೪೧೧೧, ೮೦೭೩೯೭೨೯೨೯,೭೪೦೬೨೭೨೨೪೬ ಸಂಖ್ಯೆಗೆ ಸಂಪರ್ಕಿಸಬಹುದು.

ಒಂದು ವೇಳೆ ಜೈವಿಕ ಪೋಷಕರು ಸಂಪರ್ಕ ಮಾಡದೇ ಇದ್ದಲ್ಲಿ ಮಗುವನ್ನು ಕಾನೂನಾತ್ಮಕ ದತ್ತು ನೀಡುವ ಪ್ರಕ್ರಿಯೆ ನಡೆಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಹಾಂತೇಶ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button